ಆಂಧ್ರಪ್ರದೇಶದಲ್ಲಿ ಕುಟುಂಬಗಳಿಗಿಂತ ಪಡಿತರ ಚೀಟಿಗಳ ಸಂಖ್ಯೆಯೇ ಹೆಚ್ಚು!

ಆಂಧ್ರಪ್ರದೇಶ ರಾಜ್ಯದಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆಗಿಂತ ಪಡಿತರ ಚೀಟಿಯ ಸಂಖ್ಯೆಯೇ ಹೆಚ್ಚಾಗಿದ್ದು, ಈ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ತಜ್ಞರ ಆತಂಕಗಳಿಗೆ ಕಿವಿಗೊಡದ ಸರ್ಕಾರ ಇನ್ನೂ 1,91
ಆಂಧ್ರಪ್ರದೇಶದಲ್ಲಿ ಕುಟುಂಬಗಳಿಗಿಂತ ಪಡಿತರ ಚೀಟಿಗಳ ಸಂಖ್ಯೆಯೇ ಹೆಚ್ಚು!
ಆಂಧ್ರಪ್ರದೇಶದಲ್ಲಿ ಕುಟುಂಬಗಳಿಗಿಂತ ಪಡಿತರ ಚೀಟಿಗಳ ಸಂಖ್ಯೆಯೇ ಹೆಚ್ಚು!
ವಿಜಯವಾಡ: ಆಂಧ್ರಪ್ರದೇಶ ರಾಜ್ಯದಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆಗಿಂತ ಪಡಿತರ ಚೀಟಿಯ ಸಂಖ್ಯೆಯೇ ಹೆಚ್ಚಾಗಿದ್ದು, ಈ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.  ಆದರೆ ತಜ್ಞರ ಆತಂಕಗಳಿಗೆ ಕಿವಿಗೊಡದ ಸರ್ಕಾರ ಇನ್ನೂ 1,91 ಲಕ್ಷ ಪಡಿತರ ಚೀಟಿಗಳನ್ನು ವಿತರಿಸಲು ಸಿದ್ಧತೆ ನಡೆಸಿದೆ.
2019 ರ ಲೋಕಸಭಾ ಚುನಾವಣೆಗೆ ಜನರನ್ನು ಸೆಳೆಯುವ ಉದ್ದೇಶದಿಂದ ಇನ್ನೂ 1.91 ಲಕ್ಷ ಪಡಿತರ ಚೀಟಿಗಳನ್ನು ವಿತರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದ್ದು, ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ 153.56 ಕೋಟಿ ರೂಪಾಯಿ ಹೆಚ್ಚಿನ ಹೊರೆ ಬೀಳಲಿದೆ. ಆಂಧ್ರಪ್ರದೇಶದಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆಗಿಂತಲೂ ಈಗಾಗಲೇ ವಿತರಣೆ ಮಾಡಲಾಗಿರುವ ಪಡಿತರ ಚೀಟಿಯೇ ಹೆಚ್ಚಾಗಿರುವುದು ನಿಯಮಗಳ ಉಲ್ಲಂಘನೆಯೂ ಸಹ ಆಗಿದೆ. 
ಈ ವಿಷಯಕ್ಕೆ ಸಂಬಂಧಿಸಿದಂತೆ ನಾಗರಿಕ ಪೂರೈಕೆ ಇಲಾಖೆಯ ಎಚ್ಚರಿಕೆಯ ಹೊರತಾಗಿಯೂ ಟಿಡಿಪಿ ಸರ್ಕಾರ ಈಗಾಗಲೇ ಇರುವ 1.44 ಕೋಟಿ ಪಡಿತರ ಚೀಟಿಗಳೊಂದಿಗೆ ಇನ್ನೂ 1.91 ಲಕ್ಷ ಪಡಿತರ ಚೀಟಿಗಳನ್ನು ವಿತರಣೆ ಮಾಡಲು ಪಟ್ಟು ಹಿಡಿದೆ. ಯೋಜನೆಯ ಪ್ರಕಾರ ಎಲ್ಲವೂ ನಡೆದರೆ ಆಂಧ್ರಪ್ರದೇಶದಲ್ಲಿ 1.58 ಕೋಟಿ ಪಡಿತರ ಚೀಟಿ ಅಸ್ತಿತ್ವದಲ್ಲಿರಲಿವೆ. ಆದರೆ ಸ್ಮಾರ್ಟ್ ಪ್ಲಸ್ ಸಮೀಕ್ಷೆಯ ಪ್ರಕಾರ ಕುಟುಂಬಗಳ ಸಂಖ್ಯೆ ಮಾತ್ರ 1.38 ಕೋಟಿಯಷ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com