15,000 ಕೋಟಿ ರೂಪಾಯಿ ಯೋಜನೆಗೆ ಸೇನೆ ಅನುಮೋದನೆ: ಶಸ್ತ್ರಾಸ್ತ್ರ, ಟ್ಯಾಂಕ್ ಗಳ ಸಾಮಗ್ರಿಗಳು ದೇಶಿಯವಾಗಿ ಉತ್ಪಾದನೆ!

ವರ್ಷಗಳ ಚರ್ಚೆಯ ನಂತರ ಶಸ್ತ್ರಾಸ್ತ್ರ, ಟ್ಯಾಂಕ್ ಗಳಿಗೆ ಅಗತ್ಯವಿರುವ ಯುದ್ಧ ಸಾಮಗ್ರಿಗಳನ್ನು ದೇಶೀಯವಾಗಿ ಉತ್ಪಾದನೆ ಮಾಡುವ ಸುಮಾರು 15,000 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಭಾರತೀಯ ಸೇನೆ ಒಪ್ಪಿಗೆ
15,000 ಕೋಟಿ ರೂಪಾಯಿ ಯೋಜನೆಗೆ ಸೇನೆ ಅನುಮೋದನೆ: ಶಸ್ತ್ರಾಸ್ತ್ರ, ಟ್ಯಾಂಕ್ ಗಳ ಸಾಮಗ್ರಿಗಳು ದೇಶಿಯವಾಗಿ ಉತ್ಪಾದನೆ!
15,000 ಕೋಟಿ ರೂಪಾಯಿ ಯೋಜನೆಗೆ ಸೇನೆ ಅನುಮೋದನೆ: ಶಸ್ತ್ರಾಸ್ತ್ರ, ಟ್ಯಾಂಕ್ ಗಳ ಸಾಮಗ್ರಿಗಳು ದೇಶಿಯವಾಗಿ ಉತ್ಪಾದನೆ!
ನವದೆಹಲಿ: ವರ್ಷಗಳ ಚರ್ಚೆಯ ನಂತರ ಶಸ್ತ್ರಾಸ್ತ್ರ, ಟ್ಯಾಂಕ್ ಗಳಿಗೆ ಅಗತ್ಯವಿರುವ ಯುದ್ಧ ಸಾಮಗ್ರಿಗಳನ್ನು ದೇಶೀಯವಾಗಿ ಉತ್ಪಾದನೆ ಮಾಡುವ ಸುಮಾರು 15,000 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಭಾರತೀಯ ಸೇನೆ ಒಪ್ಪಿಗೆ ಸೂಚಿಸಿದೆ. 
ಆಮದು ಮಾಡಿಕೊಳ್ಳುವುದರಿಂದ ಉಂಟಾಗುವ ಸಮಯದ ವಿಳಂಬ ಹಾಗೂ ಆರ್ಥಿಕ ಹೊರೆಯನ್ನು ತಪ್ಪಿಸುವುದಕ್ಕಾಗಿ ದೇಶೀಯವಾಗಿ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡುವ ಯೋಜನೆಗೆ ಅನುಮೋದನೆ ನೀಡಲಾಗಿದೆ. 
ಅಧಿಕೃತ ಮೂಲಗಳ ಪ್ರಕಾರ 11 ಖಾಸಗಿ ಸಂಸ್ಥೆಗಳು ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಭಾಗಿಯಾಗಲಿದ್ದು, ರಕ್ಷಣಾ ಇಲಾಖೆ ಮೇಲ್ವಿಚಾರಣೆ ವಹಿಸಿಕೊಳ್ಳಲಿದೆ. ಯೋಜನೆಯ ಭಾಗವಾಗಿ ರಾಕೆಟ್, ವಾಯು ರಕ್ಷಣಾ ವ್ಯವಸ್ಥೆ, ಫಿರಂಗಿ, ಗನ್ಗಳು, ಯುದ್ಧ ವಾಹನಗಳು, ಗ್ರೆನೇಡ್ ಉಡಾವಣಾ ಸಾಮಗ್ರಿಗಳು ಶೀಘ್ರವೇ ಉತ್ಪಾದನೆಯಾಗಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com