ನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶಕ್ಕೆ 1, 161 ಕೋಟಿ ವಿಪತ್ತು ಪರಿಹಾರ ಬಿಡುಗಡೆ

ಪ್ರವಾಹ, ಭೂಕುಸಿತ, ಬರ ಮತ್ತಿತರ ಪ್ರಾಕೃತಿಕ ವಿಪತ್ತಿಗೆ ಒಳಗಾಗಿದ್ದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರಸರ್ಕಾರ ಇಂದು 1, 161 ಕೋಟಿ ರೂಪಾಯಿ ವಿಪತ್ತು ಪರಿಹಾರವನ್ನು ಬಿಡುಗಡೆ ಮಾಡಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ : ಪ್ರವಾಹ, ಭೂಕುಸಿತ,  ಬರ ಮತ್ತಿತರ ಪ್ರಾಕೃತಿಕ ವಿಪತ್ತಿಗೆ ಒಳಗಾಗಿದ್ದ  ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರಸರ್ಕಾರ ಇಂದು 1, 161 ಕೋಟಿ ರೂಪಾಯಿ ವಿಪತ್ತು ಪರಿಹಾರವನ್ನು  ಬಿಡುಗಡೆ ಮಾಡಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪರಿಹಾರ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.

ಬರದ ಹಿನ್ನೆಲೆಯಲ್ಲಿ ರಾಜಸ್ತಾನಕ್ಕೆ 526.14 ಕೋಟಿ,  ಪ್ರವಾಹ ಪೀಡಿತ  ಅಸ್ಸಾಂ  ರಾಜ್ಯಕ್ಕೆ 480. 87 ಕೋಟಿ, ಹಾಗೂ ಪ್ರವಾಹ , ಭೂಕುಸಿತ ಸಂಭವಿಸಿದ್ದ ಹಿಮಾಚಲ ಪ್ರದೇಶಕ್ಕೆ 84.60 ಕೋಟಿ, ಸಿಕ್ಕಿಂಗೆ 67.40 ಕೋಟಿ, ಒಕ್ಕಿ ಚಂಡಮಾರುತದಿಂದಾಗಿ ಲಕ್ಷದ್ವೀಪಕ್ಕೆ 2. 16 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಗೃಹ ಸಚಿವಾಲಯ ವಕ್ತಾರರು ತಿಳಿಸಿದ್ದಾರೆ.

ಇಂದಿನ ಉನ್ನತ ಮಟ್ಟದ ಸಭೆಯಲ್ಲಿ  ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್  ಹಾಗೂ ಗೃಹ, ಹಣಕಾಸು ಮತ್ತು ಕೃಷಿ ಸಚಿವಾಲಯದ ಹಿರಿಯ  ಅಧಿಕಾರಿಗಳು ಪಾಲ್ಗೊಂಡಿದ್ದರು.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com