ಕರ್ನಾಟಕದ ಅಭಿವೃದ್ಧಿ ಯಾತ್ರೆಯಲ್ಲಿ ಹೆಗಲಿಗೆ ಹೆಗಲು ನೀಡುತ್ತೇವೆ: ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಕ್ಷದ ಕಾರ್ಯಕರ್ತರು ಹಾಗೂ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
ಕರ್ನಾಟಕದ ಅಭಿವೃದ್ಧಿ ಯಾತ್ರೆಯಲ್ಲಿ ಹೆಗಲಿಗೆ ಹೆಗಲು ನೀಡುತ್ತೇವೆ: ಪ್ರಧಾನಿ ನರೇಂದ್ರ ಮೋದಿ
ಕರ್ನಾಟಕದ ಅಭಿವೃದ್ಧಿ ಯಾತ್ರೆಯಲ್ಲಿ ಹೆಗಲಿಗೆ ಹೆಗಲು ನೀಡುತ್ತೇವೆ: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಕ್ಷದ ಕಾರ್ಯಕರ್ತರು ಹಾಗೂ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. 
ದೆಹಲಿಯ ಪಕ್ಷದ ಕಚೇರಿಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಕೆಲವರು  ಬಿಜೆಪಿಯನ್ನು ಉತ್ತರ ಭಾರತದ ಪಕ್ಷವೆಂದು, ಹಿಂದಿ ಪಕ್ಷವೆಂಬ ಭಾವನೆಯನ್ನು ಸೃಷ್ಠಿಸಿದ್ದರು, ಆದರೆ ಈ ರೀತಿಯ ಸುಳ್ಳು ಹಬ್ಬಿಸುತ್ತಿದ್ದವರಿಗೆ ಇಂದು ಕರ್ನಾಟಕದ ಜನತೆ ಉತ್ತರ ನೀಡಿದ್ದಾರೆ, ನಾನು ಕರ್ನಾಟಕಕ್ಕೆ ಹೋದಾಗ ಅಲ್ಲಿನ ಜನತೆ ಭಾಷೆಯ ವಿಷಯವಾಗಿ ಎಂದೂ ತಾರತಮ್ಯ ಮಾಡಿಲ್ಲ, ಅಷ್ಟು ಪ್ರೀತಿ ತೋರಿದ್ದಾರೆ ಎಂದು ಮೋದಿ ಹೇಳಿದ್ದಾರೆ. 
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದ ಜನತೆ ತಿರಸ್ಕರಿಸಿದ್ದಾರೆ ಚುನಾವಣೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ,  ಆದರೆ ಕಾಂಗ್ರೆಸ್ ನ ಸ್ವಾರ್ಥದಿಂದ ಭಾರತದ ಸಂವಿಧಾನದ ಮೂಲ ಆಶಯಕ್ಕೇ ಧಕ್ಕೆ ಉಂಟಾಗುತ್ತಿದೆ ಇದು ಆತಂಕಕಾರಿ ವಿಷಯ, ಆದರೆ ಬಿಜೆಪಿ ಲೋಕತಂತ್ರಕ್ಕೆ ಸಮರ್ಪಿತವಾಗಿದೆ, ಕರ್ನಾಟಕದ ಅಭಿವೃದ್ಧಿ ಯಾತ್ರೆಯಲ್ಲಿ ಹೆಗಲಿಗೆ ಹೆಗಲು ನೀಡುತ್ತೆವೆ ಎಂದು ಮೋದಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com