ಬಿಹಾರದಲ್ಲಿ ಆರ್ ಜೆಡಿಯಿಂದಲೂ ಸರ್ಕಾರ ರಚನೆ ಹಕ್ಕು ಮಂಡನೆ ಪ್ರಸ್ತಾಪ

ಕರ್ನಾಟಕದಲ್ಲಿನ ರಾಜ್ಯಪಾಲರ ನಿರ್ಧಾರದಂತೆ ಬಿಹಾರದಲ್ಲಿಯೂ ಅತಿದೊಡ್ಡ ಪಕ್ಷವಾಗಿರುವ ಆರ್ ಜೆಡಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಒತ್ತಾಯಿಸಿದ್ದಾರೆ.
ಲಾಲು ಪ್ರಸಾದ್ ಯಾದವ್
ಲಾಲು ಪ್ರಸಾದ್ ಯಾದವ್

ಪಾಟ್ನಾ : ಕರ್ನಾಟಕದಲ್ಲಿನ ರಾಜ್ಯಪಾಲರ ನಿರ್ಧಾರದಂತೆ ಬಿಹಾರದಲ್ಲಿಯೂ ಅತಿದೊಡ್ಡ ಪಕ್ಷವಾಗಿರುವ ಆರ್ ಜೆಡಿ ಸರ್ಕಾರ ರಚನೆಗೆ ಅವಕಾಶ  ಮಾಡಿಕೊಡಬೇಕು ಎಂದು ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್  ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿನ ಪ್ರಜಾಪ್ರಭುತ್ವ ಕಗ್ಗೂಲೆ ಖಡಿಸಿ ನಾಳೆ ಒಂದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಬಿಹಾರ ಸರ್ಕಾರವನ್ನು ವಿಸರ್ಜಿಸಿ ಕರ್ನಾಟಕ ರಾಜ್ಯಪಾಲರು ಅತಿದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಿರುವಂತೆ ಬಿಹಾರದಲ್ಲಿಯೂ ದೊಡ್ಡ ಪಕ್ಷವಾಗಿರುವ ಆರ್ ಜೆಡಿಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು  ಈ ಸಂಬಂಧ ರಾಜ್ಯಪಾಲರನ್ನು ತಮ್ಮ ಶಾಸಕರೊಂದಿಗೆ ಭೇಟಿ ಮಾಡುವುದಾಗಿ ತೇಜಸ್ವಿ ಯಾದವ್ ತಿಳಿಸಿದ್ದಾರೆ.

2015ರಲ್ಲಿ ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆರ್ ಜೆಡಿ 80 ಸ್ಥಾನಗಳನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿದೆ. ಜೆಡಿಯು 70 , ಬಿಜೆಪಿ 53 ಸ್ಥಾನಗಳನ್ನು ಹೊಂದಿದ್ದು, ಜೆಡಿಯು , ಬಿಹಾರ ಮೈತ್ರಿಕೂಟ ಸರ್ಕಾರ ಪ್ರಸ್ತುತ  ಆಡಳಿತ ನಡೆಸುತ್ತಿವೆ.

 ಈ ಮಧ್ಯೆ ಕರ್ನಾಟಕ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿದ್ದು, ಆರ್ ಎಸ್ ಎಸ್ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೇಂದರ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com