ರಾಷ್ಟ್ರಪತಿ/ರಾಜ್ಯಪಾಲರು ಯಾವುದೇ ನ್ಯಾಯಾಲಯಕ್ಕೂ ಉತ್ತರ ನೀಡಬೇಕಿಲ್ಲ: ಬಿಜೆಪಿ ಪರ ವಕೀಲ ರೋಹ್ಟಗಿ

ಸರ್ಕಾರ ರಚನೆ ವಿಚಾರದಲ್ಲಿ ಯಾವ ಪಕ್ಷವನ್ನು ಆಹ್ವಾನಿಸಬೇಕು ಎಂಬುದು ರಾಜ್ಯಪಾಲರ ಪರಮಾಧಿಕಾರ.. ಅವರ ವಿವೇಚನೆ ಮೇರೆಗೆ ಅವರು ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸರ್ಕಾರ ರಚನೆ ವಿಚಾರದಲ್ಲಿ ಯಾವ ಪಕ್ಷವನ್ನು ಆಹ್ವಾನಿಸಬೇಕು ಎಂಬುದು ರಾಜ್ಯಪಾಲರ ಪರಮಾಧಿಕಾರ.. ಅವರ ವಿವೇಚನೆ ಮೇರೆಗೆ ಅವರು ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು. ಈ ಬಗ್ಗೆ ರಾಷ್ಟ್ರಪತಿಗಳಾಗಲಿ ಅಥವಾ ರಾಜ್ಯಪಾಲರಾಗಲಿ ಯಾವುದೇ ನ್ಯಾಯಾಲಯಕ್ಕೂ ಉತ್ತರ ನೀಡಬೇಕಿಲ್ಲ ಎಂದು ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಸರ್ಕಾರ ರಚನೆ ಕಸರತ್ತು ಸಂಬಂಧ ನಿನ್ನೆ ರಾತ್ರಿ ನಡೆದ ರಾಜಕೀಯ ಹೈ ಡ್ರಾಮಾ ಕುರಿತು ಮಾತನಾಡಿದ ಮುಕುಲ್ ರೋಹ್ಟಗಿ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಸಲ್ಲಿಕೆ ಮಾಡಿರುವ ಅರ್ಜಿಯನ್ನು ವಜಾ ಗೊಳಿಸುವಂತೆ ಮನವಿ ಮಾಡಲಾಗಿತ್ತು. ಸಾಂವಿಧಾನಿಕ ಪ್ರಕ್ರಿಯೆಯನ್ನು ತಡೆಯಲೆತ್ನಿಸುತ್ತಿದ್ದು, ರಾಜ್ಯಪಾಲರ ಅಧಿಕಾರನವನ್ನು ಸ್ಥಗಿತಗೊಳಿಸಬೇಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ರಾಜ್ಯಪಾಲರ ಕೆಲಸವೇನಿದ್ದರೂ, ರಾಜಕೀಯ ಪಕ್ಷವನ್ನು ಸರ್ಕಾರ ರಚನೆ ಮಾಡಲು ಆಹ್ವಾನ ನೀಡುವುದಷ್ಟೇ.. ಆದರೆ ಯಾವ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬೇಕು ಎಂಬುದು ಅವರ ವಿವೇಚನೆಗೆ ಬಿಟ್ಟಿದ್ದು.. ರಾಜ್ಯಪಾಲರಾಗಲಿ ಅಥವಾ ರಾಷ್ಟ್ರಪತಿಗಳಾಗಲಿ ಅವರು ಯಾವುದೇ ಕಾರಣಕ್ಕೂ ನ್ಯಾಯಾಲಯಗಳಿಗೆ ಈ ಬಗ್ಗೆ ಉತ್ತರ ನೀಡಬೇಕಿಲ್ಲ. ನ್ಯಾಯಾಲಯ ಕೂಡ ಸಾಂವಿಧಾನಿಕ ಪ್ರಕ್ರಿಯೆಗೆ ತಡೆ ನೀಡಬಾರದು ಎಂದು ರೋಹ್ಟಗಿ ಹೇಳಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, ಕಾಂಗ್ರೆಸ್-ಜೆಡಿಎಸ್ ಈ ಅರ್ಜಿಯನ್ನು ಸಲ್ಲಿಸಬೇಕಾಗಿಲ್ಲ. ಅವರು ಬಹುಮತ ಸಾಬೀತಿಗೆ ಕಾದು ಆ ಬಳಿಕ ಈ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com