ನಾನು ಕಲ್ಕಿ, ವಿಷ್ಣುವಿನ 10ನೇ ಅವತಾರ, ಕಚೇರಿಗೆ ಬರಲ್ಲ; ಗುಜರಾತ್ ಸರ್ಕಾರಿ ಅಧಿಕಾರಿ

ವಿಷ್ಣುವಿನ 10ನೇ ಅವತಾರವಾದ ಕಲ್ಕಿ ನಾನು. ವಿಶ್ವ ಕಲ್ಯಾಣಕ್ಕಾಗಿ ನಾನು ತಪಸ್ಸನ್ನು ಮಾಡಿದ್ದೇನೆ. ಹಾಗಾಗಿ ಕಚೇರಿಗೆ ಬರಲು ಸಾಧ್ಯವಿಲ್ಲ. ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದ ಗುಜರಾತ್ ರಾಜ್ಯದ ಸರ್ಕಾರಿ ಅಧಿಕಾರಿಯೊಬ್ಬ ಸರ್ಕಾರಕ್ಕೆ ನೀಡಿರುವ ಉತ್ತರವಿದು...
ಗುಜರಾತ್ ಸರ್ಕಾರಿ ಅಧಿಕಾರಿ
ಗುಜರಾತ್ ಸರ್ಕಾರಿ ಅಧಿಕಾರಿ
ಅಹಮದಾಬಾದ್; ವಿಷ್ಣುವಿನ 10ನೇ ಅವತಾರವಾದ ಕಲ್ಕಿ ನಾನು. ವಿಶ್ವ ಕಲ್ಯಾಣಕ್ಕಾಗಿ ನಾನು ತಪಸ್ಸನ್ನು ಮಾಡಿದ್ದೇನೆ. ಹಾಗಾಗಿ ಕಚೇರಿಗೆ ಬರಲು ಸಾಧ್ಯವಿಲ್ಲ. ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದ ಗುಜರಾತ್ ರಾಜ್ಯದ ಸರ್ಕಾರಿ ಅಧಿಕಾರಿಯೊಬ್ಬ ಸರ್ಕಾರಕ್ಕೆ ನೀಡಿರುವ ಉತ್ತರವಿದು. 
ಗುಜರಾತ್'ನ ಸರ್ದಾರ್ ಸರೋವರ್ ಪೂನರ್ವಸತಿ ಆಯೋಗದಲ್ಲಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಆಗಿರುವ ರಮೇಶ್ ಅವರು ಕರ್ತವ್ಯಕ್ಕೆ ಸರಿಯಾಗಿ ಹಾಜರಾದ ಹಿನ್ನಲೆಯಲ್ಲಿ ಸರ್ಕಾರಕ್ಕೆ ಈ ರೀತಿಯಾಗಿ ಉತ್ತರವನ್ನು ನೀಡಿದ್ದಾರೆ. 
ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದ ಹಿನ್ನಲೆಯಲ್ಲಿ ಸರ್ಕಾರ ರಮೇಶ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ರಮೇಶ್ ಅವರು ನೀಡಿರುವ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
ನೀವು ನಂಬುವುದಿಲ್ಲ. ನಾನು ವಿಷ್ಣುವಿನ 10ನೇ ಅವತಾರ. 2010ರ ಮಾರ್ಚ್ ತಿಂಗಳಿನಲ್ಲಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಾಲ್ಕು ಕಲ್ಕಿಯೆಂಬುದು ಮನವರಿಕೆಯಾಯಿತು., ಆಗಿನಿಂದಲೇ ನನ್ನಲ್ಲಿ ದೈವೀಶಕ್ತಿಗಳು ಮೈಗೂಡಿವೆ. ಲೋಕ ಕಲ್ಯಾಣಕ್ಕಾಗಿ ತಪಸ್ಸು ಮಾಡುತ್ತಿದ್ದೇನೆ. ನನ್ನ ತಪ್ಪಿಸ್ಸಿನಿಂದಲೇ ದೇಶದಲ್ಲಿ ಈಗ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ ಕಚೇರಿಗೆ ಬರುವುದಿಲ್ಲ ಎಂದು ರಮೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com