100 ಕೋಟಿ ಭಾರತೀಯರ ಡಿಎನ್ಎದಲ್ಲೇ ಭ್ರಷ್ಟಾಚಾರ ಇದೆ: ಯುಪಿ ಸಚಿವ

100 ಕೋಟಿ ಭಾರತೀಯರ ರಕ್ತದಲ್ಲೇ ಭ್ರಷ್ಟಾಚಾರ ಇದೆ ಎಂದು ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್‌ ರಾಜಭಾರ್‌ ಅವರು...
ಓಂ ಪ್ರಕಾಶ್‌ ರಾಜಭಾರ್‌
ಓಂ ಪ್ರಕಾಶ್‌ ರಾಜಭಾರ್‌
ಲಖನೌ: 100 ಕೋಟಿ ಭಾರತೀಯರ ರಕ್ತದಲ್ಲೇ ಭ್ರಷ್ಟಾಚಾರ ಇದೆ ಎಂದು ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್‌ ರಾಜಭಾರ್‌ ಅವರು ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಮತ್ತೊಮ್ಮೆ ಮುಜುಗರ ಉಂಟುಮಾಡಲಾಗಿದೆ.
ಹಮೀರ್‌ಪುರ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ರಾಜಭಾರ್‌ ಅವರು, ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಅಷ್ಟು ಸುಲಭವಲ್ಲ; ಏಕೆಂದರೆ ಇದು ದೇಶಾದ್ಯಂತ ಅತಿಯಾಗಿ ಹರಡಿಕೊಂಡಿರುವ ಪಿಡುಗಾಗಿದೆ ಎಂದು ಹೇಳಿದರು. ಭ್ರಷ್ಟಾಚಾರ ಎನ್ನುವುದು ಎಷ್ಟು ಆಳವಾಗಿದೆ ಎಂದರೆ ಅದು ನೂರು ಕೋಟಿ ಭಾರತೀಯರ ಡಿಎನ್ ದಲ್ಲೇ ಇದೆ ಎಂದಿದ್ದಾರೆ.
ಸಮಾಜದಿಂದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಸಚಿವರು ಹೇಳಿದ್ದಾರೆ. 
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ದ ಖುದ್ದಾಗಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ ಎಂದು ರಾಜಭಾರ್‌ ತಿಳಿಸಿದರು.
ಇದೇ ಸಚಿವರು ಈ ಹಿಂದೆ ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದ್ದರು. 
ರಾಜಭಾರ್‌ ಅವರ ಈ ಮಾತುಗಳು ಅಗ್ಗದ ಪ್ರಚಾರ ಪಡೆಯುವ ಉದ್ದೇಶದ್ದಾಗಿದೆ ಎಂದು ಬಿಜೆಪಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com