ಬರಿಗೈಯಲ್ಲಿ ಶೌಚಗುಂಡಿ ಸ್ವಚ್ಛಗೊಳಿಸಿ ಮೇಡಕ್ ಜಿಲ್ಲಾಧಿಕಾರಿ, ಸುದ್ದಿ ವೈರಲ್!

ತೆಲಂಗಾಣದ ಮೇಡಕ್ ಜಿಲ್ಲೆಯ ಜಿಲ್ಲಾಧಿಕಾರಿ ಕೆ. ಧರ್ಮರೆಡ್ಡಿ ಅವರು ಬರಿಗೈಯಲ್ಲಿ ಮಲಗುಂಡಿಯನ್ನು ಶುಚಿಗೊಳಿಸುವ ಮೂಲಕ ಸರಳತೆ ಮೆರೆದಿದ್ದಾರೆ...
ಜಿಲ್ಲಾಧಿಕಾರಿ ಧರ್ಮರೆಡ್ಡಿ
ಜಿಲ್ಲಾಧಿಕಾರಿ ಧರ್ಮರೆಡ್ಡಿ
ತೆಲಂಗಾಣ: ತೆಲಂಗಾಣದ ಮೇಡಕ್ ಜಿಲ್ಲೆಯ ಜಿಲ್ಲಾಧಿಕಾರಿ ಕೆ. ಧರ್ಮರೆಡ್ಡಿ ಅವರು ಬರಿಗೈಯಲ್ಲಿ ಮಲಗುಂಡಿಯನ್ನು ಶುಚಿಗೊಳಿಸುವ ಮೂಲಕ ಸರಳತೆ ಮೆರೆದಿದ್ದಾರೆ. 
ಸ್ವಚ್ಛ ಭಾರತ ಅಭಿಯಾನದಡಿ ಪುಣೆಯಲ್ಲಿ ಆಯೋಜಿಸಲಾಗಿದ್ದ ಬಯಲು ಮಲವಿಸರ್ಜನೆ ಮುಕ್ತ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಧರ್ಮರೆಡ್ಡಿ ಅವರು ಬರಿಗೈಯಲ್ಲಿ ಶೌಚಗುಂಡಿಯನ್ನು ಶುಚಿಗೊಳಿಸಿದ್ದಾರೆ. 
ಕಳೆದ ವರ್ಷ ಮೇಡಕ್ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ. ರಾಜ್ಯದಲ್ಲಿ ಬಯಲು ಶೌಚ ಮುಕ್ತವೆಂದು ಘೋಷಿಸಲ್ಪಟ್ಟ ಜಿಲ್ಲೆಗಳ ಪಟ್ಟಿಯಲ್ಲಿ ಮೇಡಕ್ 8ನೇ ಜಿಲ್ಲೆಯಾಗಿದೆ. 
ಮಲವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವುದರ ಕುರಿತಂತೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮೊದಲು ಸಂಬಂಧಿತ ಸಿಬ್ಬಂದಿ ಸಂಪೂರ್ಣ ಪ್ರಕ್ರಿಯೆಯನ್ನು ಪ್ರದರ್ಶಿಸಿದ್ದರು. ಬಳಿಕ ಧರ್ಮರೆಡ್ಡಿ ಅವರು ನೇರವಾಗಿ ಮಲಗುಂಡಿಗೆ ಇಳಿದು ಸಾವಯವ ಗೊಬ್ಬರವನ್ನು ಬರಿಗೈಯಲ್ಲಿ ಹಿಡಿದು ತೋರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com