ಚೆನ್ನೈ: ಈ ಮಗುವಿನ ಜನ್ಮ ದಾಖಲೆಯಲ್ಲಿ ತಂದೆಯ ಹೆಸರೇ ಇಲ್ಲ!

ಭಾರತದಲ್ಲಿ ಹುಟ್ಟುವ ಪ್ರತಿ ಮಗುವಿಗೆ ಜನನ ಪ್ರಮಾಣಪತ್ರ ಮಾಡಿಸುವುದು ಕಡ್ಡಾಯವಿದೆ. ಹಾಗೆಯೇ ಈ ಜನನ ಪ್ರಮಾಣಪತ್ರದಲಿ ಮಗುವಿನ ತಂದೆಯ ಹೆಸರು ಇರಬೇಕಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ಭಾರತದಲ್ಲಿ ಹುಟ್ಟುವ ಪ್ರತಿ ಮಗುವಿಗೆ ಜನನ ಪ್ರಮಾಣಪತ್ರ ಮಾಡಿಸುವುದು ಕಡ್ಡಾಯವಿದೆ. ಹಾಗೆಯೇ ಈ ಜನನ ಪ್ರಮಾಣಪತ್ರದಲಿ ಮಗುವಿನ ತಂದೆಯ ಹೆಸರು ಇರಬೇಕಾಗುತ್ತದೆ. ಆದರೆ ಇದೀಗ ಚಿಅನ್ನೈನ ಒಂದು ಮಗು ತಂದೆಯ ಹೆಸರು ಉಲ್ಲೇಖಿಸದೆ ಜನನ ಪ್ರಮಾಣ ಪತ್ರ ಪಡೆದುಕೊಂಡಿದೆ.
ಕೃತಕ ಗರ್ಭಧಾರಣೆ ಮೂಲಕ ಜನಿಸಿದ ಮಗು ಇದಾಗಿದ್ದು ತಾಯಿಯ ಕೋರಿಕೆಯಂತೆ ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನು ಕೈಬಿಡಲಾಗಿದೆ.
ದಾನಿಯೊಬ್ಬರ ವೀರ್ಯಾಣುವಿನಿಂದ ಜನಿಸಿದ ಮಗುವಿಗೆ ಅದರ ತಂದೆಯ ಹೆಸರು ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ ಸೂಚಿಸಿದ್ದ ಹಿನ್ನೆಲೆಯಲ್ಲಿ ಅರ್ಜಿಯಲ್ಲಿನ ತಂದೆಯ ಹೆಸರಿನ ಜಾಗವನ್ನು ಖಾಲಿ ಬಿಡಲಾಗಿದೆ.
ತಮಿಳು ನಾಡಿನ ಮಧುಮಿತಾ ತನ್ನ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದರು. ಹೀಗೆ ವಿಚ್ಚೇದನ ಪಡೆದ ಬಳಿಕ ಆಕೆ  ಕೃತಕ ಗರ್ಭದಾರಣೆ ಮೂಲಕವಾಗಿ 2017ರ ಏಪ್ರಿಲ್ ನಲ್ಲಿ ಹೆಣ್ಣು ಮಗುವಿನ ತಾಯಿಯಾದರು. ಮಗುವಿಗೆ  ತಾವಿಶಿ ಪೆರಾರ ಎಂದು ನಾಮಕರಣ ಮಾಡಲಾಗಿತ್ತು. ಆ ವೇಳೆ ತಿರುಚ್ಚಿಯ ನಗರಪಾಲಿಕೆ ಅಧಿಕಾರಿಗಳು ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಮಧುಮಿತಾ ಅವರ ಹೆರಿಗೆ ಸಂದರ್ಭ ಸಹಕಾರ ನೀಡಿದ್ದ ಮನೀಶ್ ಎನ್ನುವವರ ಹೆಸರನ್ನು ನಮೂದಿಸಿದ್ದರು. ಆದರೆ ಮಧುಮಿತಾ ಮಗುವಿನ ತಂದೆ ಹೆಸರಿರುವ ಜಾಗದಲ್ಲಿ ಮನೀಶ್ ಹೆಸರು ಬೇಡ, ಅದನ್ನು ತೆಗೆದುಹಾಕಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಅಧಿಕಾರಿಗಳು ಂಆತ್ರ ಈ ಮನವಿಯನ್ನು ನಿರಾಕರಿಸಿದ್ದರು. ಈ ಕಾರಣಕ್ಕಾಗಿ ಮಧುಮಿತಾ ನ್ಯಾಯಾಲಯದ ಮೊರೆ ಹೊಕ್ಕರು.
ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಅರ್ಜಿಯಲ್ಲಿರುಅ ಮನೀಶ್ ಹೆಆರನ್ನು ತೆಗೆದು ಹಾಕುವಂತೆ ಸೂಚಿಸಿತ್ತು. ಇದೇ ವೇಳೆ ಮಧುಮಿತಾ ಅವರ ಮಾಜಿ ಪತಿ ಮತ್ತು ಮನೀಶ್ ಇಬ್ಬರೂ ತಾವು ಈ ಮಗುವಿನ ತಂದೆ ಅಲ್ಲವೆಂದು ನ್ಯಾಯಾಲಯಕ್ಕೆ ಲಿಖಿತ ಉತ್ತರ ನೀಡಿದ್ದರು. ಮಧುಮಿತಾ ತಾವು ಕೃತಕ ಗರ್ಭದಾರಣೆ ಮೂಲಕ ತಾಯಿಯಾಗಿದ್ದಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಿದ್ದರು. ಹೀಗಾಗಿ ನ್ಯಾಯಾಲಯವು ಪ್ರಮಾಣಪತ್ರದಲ್ಲಿನ ತಂದೆ ಹೆಸರನ್ನು ಅಳಿಸಿ ಹಾಕಿ ತಾಯ್ತಿ ಹೆಸರು ಮಾತ್ರ ಇರಿಸುವಂತೆ ಸೂಚನೆ ನಿಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com