ಭ್ರಷ್ಟ ರಸ್ತೆ ಗುತ್ತಿಗೆದಾರರ ಮೇಲೆ ಬುಲ್‌ಡೋಜರ್ ಓಡಿಸಲಾಗುವುದು: ನಿತಿನ್ ಗಡ್ಕರಿ

ಭ್ರಷ್ಟ ರಸ್ತೆ ಗುತ್ತಿಗೆದಾರರ ಮೇಲೆ ಬುಲ್‌ಡೋಜರ್ ಓಡಿಸಲಾಗುವುದು ಎಂದು ಹೇಳುವ ಮೂಲಕ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿವಾದ ಸೃಷ್ಟಿಸಿದ್ದಾರೆ...
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
ಬೇತುಲ್: ಭ್ರಷ್ಟ ರಸ್ತೆ ಗುತ್ತಿಗೆದಾರರ ಮೇಲೆ ಬುಲ್‌ಡೋಜರ್ ಓಡಿಸಲಾಗುವುದು ಎಂದು ಹೇಳುವ ಮೂಲಕ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿವಾದ ಸೃಷ್ಟಿಸಿದ್ದಾರೆ. 
ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ನಡೆದ ಅಸಂಘಟಿತ ಕಾರ್ಮಿಕರ ಕಾರ್ಯಕ್ರಮದಲ್ಲಿ ರಸ್ತೆ ಗುತ್ತಿಗೆದಾರರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡರೆ ಅವರ ಮೇಲೆ ಬುಲ್‌ಡೋಜರ್ ಓಡಿಸಲಾಗುವುದು ಎಂದು ಹೇಳಿದ್ದಾರೆ. 
ಗುತ್ತಿಗೆದಾರರು ರಸ್ತೆ ಕಾಮಗಾರಿಗಳು ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಬೇಕು. ಒಂದು ವೇಳೆ ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಅವರನ್ನು ಬುಲ್‌ಡೋಜರ್ ಎದುರು ಎಸೆಯುತ್ತೇನೆ ಎಂದು ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ. 
ರಸ್ತೆ ಗುತ್ತಿಗೆದಾರರು ನಡೆಸುವ ಭ್ರಷ್ಟಾಚಾರವನ್ನು ಸಹಿಸಲು ಸಾಧ್ಯವಿಲ್ಲ. ಕಾಮಗಾರಿಗೆ ಮಂಜೂರಾಗುವ ಹಣವು ಗುತ್ತಿಗೆದಾರರಿಗೆ ಸೇರಿದ್ದಲ್ಲ, ದೇಶದ ಬಡವರಿಗೆ ಸೇರಿದ್ದು ಎಂದು ಗಡ್ಕರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com