ಅರುಣಾಚಲಪ್ರದೇಶ ಗಡಿಯಲ್ಲಿ ಗಣಿಗಾರಿಕೆ ಮಾಡುವುದು ಸಾರ್ವಭೌಮ ಹಕ್ಕು: ಚೀನಾ

ಭಾರತ-ಚೀನಾ ನಡುವೆ ಹೊಸ ಘರ್ಷಣೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿರುವ ಗಡಿ ಭಾಗದಲ್ಲಿನ ಚಿನ್ನದ ಗಣಿಗಾರಿಕೆ ಬಗ್ಗೆ ಚೀನಾ ಸ್ಪಷ್ಟನೆ ನೀಡಿದ್ದು, ತನ್ನ ಸಾರ್ವಭೌಮ ಹಕ್ಕು ಎಂದು ಹೇಳಿದೆ.
ಅರುಣಾಚಲಪ್ರದೇಶ ಗಡಿಯಲ್ಲಿ ಗಣಿಗಾರಿಕೆ ಮಾಡುವುದು ಸಾರ್ವಭೌಮ ಹಕ್ಕು: ಚೀನಾ
ಅರುಣಾಚಲಪ್ರದೇಶ ಗಡಿಯಲ್ಲಿ ಗಣಿಗಾರಿಕೆ ಮಾಡುವುದು ಸಾರ್ವಭೌಮ ಹಕ್ಕು: ಚೀನಾ
ಬೀಜಿಂಗ್: ಭಾರತ-ಚೀನಾ ನಡುವೆ ಹೊಸ ಘರ್ಷಣೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿರುವ ಗಡಿ ಭಾಗದಲ್ಲಿನ ಚಿನ್ನದ ಗಣಿಗಾರಿಕೆ ಬಗ್ಗೆ ಚೀನಾ ಸ್ಪಷ್ಟನೆ ನೀಡಿದ್ದು, ತನ್ನ ಸಾರ್ವಭೌಮ ಹಕ್ಕು ಎಂದು ಹೇಳಿದೆ. 
ಅರುಣಾಚಲ ಪ್ರದೇಶದ ತನ್ನ ಗಡಿ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ನಡೆಸುವುದು ತನ್ನ ದೇಶದ ಹಕ್ಕು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ತಿಳಿಸಿದ್ದಾರೆ. " ತನ್ನ ಪ್ರದೇಶದಲ್ಲಿ ಚೀನಾ ನಿಯಮಿತವಾಗಿ ಭೌಗೋಳಿಕ ಹಾಗೂ  ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುತ್ತಲೇ ಇರುತ್ತದೆ, ಮಾಧ್ಯಮಗಳ ವರದಿಗಳು ಆಧಾರ ರಹಿತವಾದದ್ದು ಎಂದು ಲು ಕಾಂಗ್ ತಿಳಿಸಿದ್ದಾರೆ. 
ಚೀನಾದ ಹಿಡಿತದಲ್ಲಿರುವ ಟಿಬೆಟ್ ಪ್ರಾಂತ್ಯದಲ್ಲಿರುವ ಲುಂಜ್ಜ್ ಕೌಂಟಿ ಅರುಣಾಚಲ ಪ್ರದೇಶದಲ್ಲಿರುವ ಚೀನಾದ ಗಡಿ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆಯನ್ನು ನಡೆಸುತ್ತಿದೆ. ಚೀನಾ ಲಗಾತ್ತಿನಿಂದಲೂ ಅರುಣಾಚಲಪ್ರದೇಶವನ್ನು ದಕ್ಷಿಣ ಟಿಬೆಟ್ ನ ಒಂದು ಭಾಗವೆಂದೇ ವಾದ ಮಾಡುತ್ತಿದ್ದು, ಅರುಣಾಚಲಪ್ರದೇಶವನ್ನು ಅತಿಕ್ರಮಿಸುವ ಉದ್ದೇಶದಿಂದಲೇ ಚೀನಾ ಅರುಣಾಚಲ ಪ್ರದೇಶದಲ್ಲಿ ತನ್ನ ಭಾಗದಲ್ಲಿರುವ ಗಡಿಯಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಎಲ್ಎಸಿಯ 3,488 ಕಿಮೀ ಉದ್ದಕ್ಕೂ ಗಡಿಗೆ ಸಂಬಂಧಿಸಿದಂತೆ ಭಾರತ-ಚೀನಾ ನಡುವೆ ಭಿನ್ನಾಭಿಪ್ರಾಯವಿದ್ದು, ಅರುಣಾಚಲ ಪ್ರದೇಶದ ಪ್ರಾಂತ್ಯದಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಚೀನಾ ಹಕ್ಕು ಪ್ರತಿಪಾದನೆ ಮಾಡುತ್ತಿರುವುದು ಈಗ ಭಾರತ-ಚೀನಾ ನಡುವೆ ಹೊಸ ಸಂಘರ್ಷಕ್ಕೆ ಕಾರಣವಾಗಲಿದೆಯೇ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಆದರೆ ಚೀನಾ ಮಾತ್ರ ಅಚುಣಾಚಲಪ್ರದೇಶದ ತನ್ನ ಗಡಿ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತ್ತಿರುವುದನ್ನು ಸಾರ್ವಭೌಮ ಹಕ್ಕು ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com