456 ಕೋಟಿ ರು.ವಂಚನೆ: ರೋಟೋಮ್ಯಾಕ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ ಸಿಬಿಐ

ಬ್ಯಾಂಕ್ ಆಫ್ ಬರೋಡಾಗೆ 456.63 ಕೋಟಿ ರುಪಾಯಿ ಸಾಲ ಪಡೆದು ಮರು ಪಾವತಿಸದೆ ವಂಚಿಸಿದ ಆರೋಪದ ಮೇಲೆ....
ವಿಕ್ರಮ್ ಕೊಠಾರಿ
ವಿಕ್ರಮ್ ಕೊಠಾರಿ
ಲಖನೌ/ನವದೆಹಲಿ: ಬ್ಯಾಂಕ್ ಆಫ್ ಬರೋಡಾಗೆ 456.63 ಕೋಟಿ ರುಪಾಯಿ ಸಾಲ ಪಡೆದು ಮರು ಪಾವತಿಸದೆ ವಂಚಿಸಿದ ಆರೋಪದ ಮೇಲೆ ರೋಟೋಮ್ಯಾಕ್ ಪ್ರೈ.ಲಿ. ಮತ್ತು ಅದರ ಮಾಲೀಕ ವಿಕ್ರಮ್ ಕೊಠಾರಿ ಅವರ ವಿರುದ್ಧ ಸಿಬಿಐ ಮಂಗಳವಾರ ಚಾರ್ಜ್ ಶೀಟ್ ದಾಖಲಿಸಿದೆ.
ರೋಟೋಮ್ಯಾಕ್  ಪೆನ್ ಸಂಸ್ಥೆ ಒಟ್ಟು ಏಳು ವಿವಿಧ ಬ್ಯಾಂಕ್ ಗಳಿಗೆ 3,690 ಕೋಟಿ ರುಪಾಯಿ ವಂಚಿಸಿದ ಆರೋಪ ಎದುರಿಸುತ್ತಿದ್ದು, ಕಳೆದ ಮೂರು ತಿಂಗಳಿಂದ ಪ್ರಕರಣ ತನಿಖೆ ನಡೆಸಿದ ಸಿಬಿಐ ಇಂದು ಬ್ಯಾಂಕ್ ಆಫ್ ಬರೋಡಾಗೆ 456.63 ಕೋಟಿ ರುಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿದೆ.
ಪ್ರಕರಣದ ತನಿಖೆ ಮುಂದುವರೆದಿದ್ದು, ಮತ್ತಷ್ಟು ಚಾರ್ಜ್ ಶೀಟ್ ಗಳನ್ನು ಸಲ್ಲಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಚಾರ್ಜ್ ಶೀಟ್ ಸ್ವೀಕರಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ಎಂ.ಪಿ.ಚೌಧರಿ ಅವರು ಪ್ರಕರಣದ ವಿಚಾರಣೆಯನ್ನು ಮೇ 30ಕ್ಕೆ ನಿಗದಿಪಡಿಸಿದ್ದಾರೆ.
ರೋಟೋಮ್ಯಾಕ್ ಮಾಲೀಕ ವಿಕ್ರಮ್ ಕೊಠಾರಿ, ಪುತ್ರ ಮತ್ತು ನಿರ್ದೇಶಕ ರಾಹುಲ್ ಕೊಠಾರಿ, ಬ್ಯಾಂಕ್ ಆಫ್ ಬರೋಡಾದ ಅಂದಿನ ಎಜಿಎಂ ಎಸ್ ಕೆ ಉಪಾಧ್ಯಾಯ, ಬ್ಯಾಂಕ್ ನ ಅಂದಿನ ಹಿರಿಯ ಮ್ಯಾನೇಜರ್ ಓಂ ಪ್ರಕಾಶ್ ಕಪೂರ್ ಹಾಗೂ ಅಂದಿನ ಮ್ಯಾನೇಜರ್ ಶಶಿ ಬಿಸ್ವಾಸ್ ಅವರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ.
ಬ್ಯಾಂಕ್ ಗಳಿಗೆ ವಂಚಿಸಿದ ಪ್ರಕರಣಕ್ಕೆ ಬಂಧನಕೊಳ್ಳಗಾಗಿರುವ ವಿಕ್ರಮ್ ಕೊಠಾರಿ ಹಾಗೂ ಅವರ ಪುತ್ರ ರಾಹುಲ್ ಸದ್ಯ ನ್ಯಾಯಾಂಗ ಬಂಧನದಲ್ದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com