ಆರ್ ಎಸ್ ಎಸ್ ಸಿದ್ದಾಂತ ಆಕ್ಷೇಪಿಸಿದ್ದಕ್ಕೆ ಪ್ರತಿಭಟನಾಕಾರರ ಹತ್ಯೆ - ರಾಹುಲ್ ಗಾಂಧಿ ಆರೋಪ
ನವದೆಹಲಿ : ತಮಿಳುನಾಡಿನ ತೂತುಕುಡಿಯಲ್ಲಿ ನಿನ್ನೆ ನಡೆದ ಸ್ಟರ್ಲೈಟ್ ವಿರೋಧಿ ಹೋರಾಟದ ವೇಳೆ ಆರ್ ಎಸ್ ಎಸ್ ಸಿದ್ದಾಂತ ಆಕ್ಷೇಪಿಸಿದ್ದಕ್ಕೆ ಪ್ರತಿಭಟನಾಕಾರರ ಹತ್ಯೆ ನಡೆದಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ದಾಂತ ಒಪ್ಪಲು ತಮಿಳರು ನಿರಾಸ್ಕರಿಸಿದ್ದರಿಂದ ಹತ್ಯಾಕಾಂಡ ನಡೆಸಲಾಗಿದೆ. ಆರ್ ಎಸ್ ಎಸ್ ಹಾಗೂ ಪ್ರಧಾನಿ ನರೇಂದ್ರಮೋದಿ ತಮಿಳುನಾಡು ವಿರೋಧಿಯಾಗಿದ್ದಾರೆ. ಆದಾಗ್ಯೂ, ತಮಿಳುನಾಡಿನ ಜನತೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ತಮಿಳು ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ತಮಿಳುನಾಡು ಜನರ ಹೋರಾಟವನ್ನು ರಾಹುಲ್ ಗಾಂಧಿ ಬೆಂಬಲಿಸಿದ್ದಾರೆ.ತಮಿಳು ಸಹೋದರರೇ ನಿಮ್ಮೊಂದಿಗೆ ತಾವೂ ಇರುವುದಾಗಿ ಅವರು ಹೇಳಿದ್ದಾರೆ.
ಸ್ಟರ್ಲೈಟ್ ಕಂಪನಿ ಸ್ಥಗಿತಕ್ಕೆ ಆಗ್ರಹಿಸಿ ಸ್ಥಳೀಯರು ನಿನ್ನೆ ನಡೆಸಿದ ಪ್ರತಿಭಟನೆ ವೇಳೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 65 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕಂಪನಿ ಒಳಗಡೆ ಪ್ರವೇಶಿಸಲು ವಿಫಲ ಯತ್ನ ನಡೆಸಿದ ಪ್ರತಿಭಟನಾಕಾರರು, ಪೊಲೀಸ್ ವಾಹನಗಳ ಮೇಲೆ ಕಲ್ಲೂ ತೂರಾಟ ನಡೆಸಿದ್ದರು. ಪೊಲೀಸರು ಆಶ್ರುವಾಯು ಸಿಡಿಸಿ ಉದ್ರಿಕ್ತರನ್ನು ಚದುರಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ