ಎಂಎಚ್ 370 ವಿಮಾನ ಕಣ್ಮರೆ: ಒಂದು ವಾರದಲ್ಲಿ ಶೋಧ ಕಾರ್ಯಾಚರಣೆ ಸ್ಥಗಿತ, ಮಲೇಷಿಯಾ ಸರ್ಕಾರದಿಂದ ಮಾಹಿತಿ

ಮಾರ್ಚ್ 8, 2014 ರಂದು ಕಣ್ಮರೆಯಾಗಿದ್ದ ಮಲೇಷಿಯಾ ಏರ್ ಲೈನ್ಸ್ ವಿಮಾನ ಎಂಎಚ್ 370 ವಿಮಾನ ಶೋಧ ಕಾರ್ಯ ಇನ್ನೊಂದು ವಾರದಲ್ಲಿ ಮುಗಿಯುವುದಾಗಿ ......
ಎಂಎಚ್ 370 ವಿಮಾನ ಕಣ್ಮರೆ:
ಎಂಎಚ್ 370 ವಿಮಾನ ಕಣ್ಮರೆ:
Updated on
ಪುಣೆ: ಮಾರ್ಚ್ 8, 2014 ರಂದು ಕಣ್ಮರೆಯಾಗಿದ್ದ  ಮಲೇಷಿಯಾ ಏರ್ ಲೈನ್ಸ್ ವಿಮಾನ ಎಂಎಚ್ 370 ವಿಮಾನ ಶೋಧ ಕಾರ್ಯ ಇನ್ನೊಂದು ವಾರದಲ್ಲಿ ಮುಗಿಯುವುದಾಗಿ   ಆ ದೇಶದ ಅಧಿಕಾರಿಗಳು ಪುಣೆ ನಿವಾಸಿಗಳಿಗೆ ಮಾಹಿತಿ ನೀಡಿದ್ದಾರೆ. ಕಾಣೆಯಾಗಿದ್ದ ವಿಮಾನದಲ್ಲಿ ಪುಣೆ ನಿವಾಸಿಯ ಪತ್ನಿ ಪ್ರಯಾಣಿಸಿದ್ದರು.
ಕ್ರಾಂತಿ ಶಿರ್ಸತ್ ಅವರ ಪತಿ ಪ್ರಹ್ಲಾದ್ ಶಿರ್ಸತ್ ಹೇಳಿದಂತೆ ಅವರು ವಿಮಾನ ಒಂದಲ್ಲಾ ಒಂದು ದಿನ ಪತ್ತೆಯಾಗುವುದೆಂದು ಆತ್ಮವಿಶ್ವಾಸ ಹೊಂದಿದ್ದರು.
ಕೌಲಾಲಂಪುರ್ನಿಂದ ಬೀಜಿಂಗ್ ಗೆ ತೆರಳುವ ಮಾರ್ಗದ ನಡುವೆ 239 ಜನರನ್ನು ಹೊತ್ತಿದ್ದ ವಿಮಾನ ಮಾರ್ಚ್ 8, 2014 ರಂದು ಕಣ್ಮರೆಯಾಗಿತ್ತು.
ಅಮೆರಿಕಾದ ಪರಿಶೋಧನಾ ಸಂಸ್ಥೆ ಓಷನ್ ಇನ್ಫಿನಿಟಿ ಲಿಮಿಟೆಡ್ ನೊಡನೆ ಮಲೇಷಿಯಾ ಸರ್ಕಾರ ಎಂಎಚ್ 370 ವಿಮಾನ ಶೋಧನೆಗಾಗಿ ಈ ವರ್ಷ ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿತ್ತು.
ವಿಮಾನ ಶೋಧ ಕಾರ್ಯ ಇನ್ನೊಂದು ವಾರದಲ್ಲಿ ಮುಗಿಯಲಿದೆ ಎಂದು ಇಂದು ಮಲೇಷಿಯಾದ ಸರ್ಕಾರದಿಂದ ನನಗೆ  ಈ ಮೇಲ್ ಬಂದಿದೆ" ಎಂದು ಪ್ರಹ್ಲಾದ್ ಶಿರ್ಸತ್ ಪಿಟಿಐ ಗೆ ತಿಳಿಸಿದ್ದಾರೆ.
ಜನವರಿಯಿಂದ ನಡೆದ ಶೋಧಕಾರ್ಯ 90 ದಿನಗಳ ಕಾಲ ನಡೆದರೂ ಏನೂ ಪ್ರಯೋಜನವಾಗಲಿಲ್ಲ. ಆದರೆ ಮಲೇಷಿಯಾ ಸರ್ಕಾರದ ಕೋರಿಕೆಯ ಮೇರೆಗೆ  ಅದನ್ನು ಮೇ29 ರವರೆಗೆ ವಿಸ್ತರಿಸಲಾಗಿತ್ತು ಎಂದು ಓಶ್ಘನ್ ಇನ್ಫಿನಿಟಿ ತಿಳಿಸಿದೆ.
"ಇನ್ನೊಂದ್ಯು ವಾರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗುವ ವಿಶ್ವಾಸವನ್ನು ಮಲೇಷಿಯಾ ಸರ್ಕಾರ ಹೊಂದಿದೆ. ನಾಲ್ಕು ವರ್ಷಗಳ ಹಿಂದೆ ಕಾಣೆಯಾದ ವಿಮಾನಕ್ಕಾಗಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಇದು ಐದನೇ ಅಥವಾ ಆರನೇ ಕಾರ್ಯಾಚರಣೆಯಾಗಿದೆ.ಪ್ರತಿ ಬಾರಿ ಹೊಸ ಶೋಧ ಕಾರ್ಯ ಪ್ರಾರಂಭವಾದಾಗ ಹೊಸ ಭರವಸೆ ಮೂಡುತ್ತದೆ. ಆದರೆ ಅಂತಿಮವಾಗಿ ನಿರಾಶೆ ಅನುಭವಿಸುವಂತಾಗಿದೆ" ಶಿರ್ಸತ್ ಹೇಳಿದ್ದಾರೆ.
"ಪ್ರಸ್ತುತ ಹುಡುಕಾಟ ಕಾರ್ಯಾಚರಣೆಯು ಮೇ 29 ರಂದು ಅಂತ್ಯಗೊಳ್ಳುವ ಸಾಧ್ಯತೆಯಿದ್ದರೂ,ಇನ್ನಷ್ಟು ದಿನ ಹುಡುಕಾಟ ನಡೆಯುವುದೆಂದು ಣಾನು ಭಾವಿಸುತ್ತೇನೆ" ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com