'ಯೋಗಿ ಆದಿತ್ಯನಾಥ್ ಗೆ ಅವರು ಹಾಕಿದ್ದ ಚಪ್ಪಲಿಯಿಂದಲೇ ಹೊಡೆಯಬೇಕು ಅನಿಸಿತ್ತು': ಉದ್ಧವ್ ಠಾಕ್ರೆ

ಶಿವಾಜಿ ಫೋಟೋಗೆ ಮಾಲಾರ್ಪಣೆ ಮಾಡುವ ವೇಳೆ ಚಪ್ಪಲಿ ಬಿಚ್ಚದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಗೆ...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Updated on: 
ನವದೆಹಲಿ: ಶಿವಾಜಿ ಫೋಟೋಗೆ ಮಾಲಾರ್ಪಣೆ ಮಾಡುವ ವೇಳೆ ಚಪ್ಪಲಿ ಬಿಚ್ಚದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಅವರು ಹಾಕಿದ್ದ ಚಪ್ಪಲಿಯಿಂದಲೇ ಮುಖಕ್ಕೆ ಹೊಡೆಯಬೇಕು ಅನಿಸಿತ್ತು ಎಂದು ಶಿವಸೇನಾ ಮುಖ್ಯಸ್ಥ ಉದ್ದವ್‌ ಠಾಕ್ರೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಪಲ್ಗಾರ್ ಗೆ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್ ಅವರು ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ವೇಳೆ ಚಪ್ಪಲಿ ಧರಿಸಿದ್ದರು ಎಂಬ ಕಾರಣಕ್ಕೆ ಶಿವಸೇನೆ ಇಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಈ ರೀತಿ ಕಿಡಿ ಕಾರಿದೆ.
ಯೋಗಿ ಆದಿತ್ಯನಾಥ ಚಪ್ಪಲಿ ಹಾಕಿರುವುದನ್ನು ಕಂಡು ಅದೇ ಚಪ್ಪಲಿಯಿಂದ ಹೊಡೆಯಬೇಕು ಎಂದೆನಿಸಿತ್ತು. ಆದಿತ್ಯನಾಥ್ ಒಬ್ಬ ಆಷಾಢಭೂತಿ ಮುಖ್ಯಮಂತ್ರಿ. ಆತ ಯೋಗಿ ಅಲ್ಲ. ಅವನೊಬ್ಬ ಭೋಗಿ. ಯೋಗಿಯಾದವರು ಎಲ್ಲವನ್ನು ತ್ಯಜಿಸಿ ಗುಹೆಯಲ್ಲಿ ಕುಳಿತುಕೊಳ್ಳಬೇಕು. ಆದರೆ ಇವನು ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತಿದ್ದಾನೆ ಎಂದು ಶಿವಸೇನೆ ಮುಖ್ಯಸ್ಥ ಏಕವಚದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಬಿಜೆಪಿ ಹುಚ್ಚು ಕೊಲೆಗಾರನಾಗಿದ್ದು, ಅದು ತನ್ನ ದಾರಿಗೆ ಅಡ್ಡ ಬರುವ ಯಾರನ್ನಾದರೂ ಕೊಲೆ ಮಾಡುತ್ತದೆ ಎಂದು ಸೇನಾ ಸಂಪಾದಕೀಯ ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com