ಮುಂಬೈ: ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಯಶಸ್ವಿ, ಪುರುಷನಾಗಿ ಬದಲಾದ ಮಹಿಳಾ ಪೋಲೀಸ್ ಪೇದೆ

ಮಹಾರಾಷ್ಟ್ರ ಪೋಲೀಸ್ ದಳದ ಮಹಿಳಾ ಪೋಲೀಸ್ ಪೇದೆ ಲಲಿತಾ ಸಾಳ್ವೆ ಶುಕ್ರವಾರ ತಾವು ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು ಅವರೀಗ ಪುರುಷ ಪೋಲೀಸ್ ಪೇದೆಯಾಗಿ ....
ಮುಂಬೈ: ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಯಶಸ್ವಿ, ಪುರುಷನಾಗಿ ಬದಲಾದ ಮಹಿಳಾ ಪೋಲೀಸ್ ಪೇದೆ
ಮುಂಬೈ: ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಯಶಸ್ವಿ, ಪುರುಷನಾಗಿ ಬದಲಾದ ಮಹಿಳಾ ಪೋಲೀಸ್ ಪೇದೆ
ಮುಂಬೈ: ಮಹಾರಾಷ್ಟ್ರ ಪೋಲೀಸ್ ದಳದ ಮಹಿಳಾ ಪೋಲೀಸ್ ಪೇದೆ ಲಲಿತಾ ಸಾಳ್ವೆ ಶುಕ್ರವಾರ ತಾವು ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು ಅವರೀಗ ಪುರುಷ ಪೋಲೀಸ್ ಪೇದೆಯಾಗಿ ಬದಲಾಗಿದ್ದಾರೆ. 
ಮಹಾರಾಷ್ಟ್ರ ರಾಜ್ಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹಾ ಘಟನೆ ನಡೆದಿದ್ದು ದಕ್ಷಿಣ ಮುಂಬೈಯ ಸೇಂಟ್ ಜಾರ್ಜ್ ಆಸ್ಪತ್ರೆಯ ಪ್ರಖ್ಯಾತ ಪ್ಲಾಸ್ಟಿಕ್ ಸರ್ಜನ್ ಡಾ. ರಜತ್ ಕಪೂರ್ ಮತ್ತು ತಂಡ ಸತತ ನಾಲ್ಕು ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದೆ.
ಮೇ 22 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಶಸ್ತ್ರಚಿಕಿತ್ಸಾ ಪೂರ್ವ ಪರೀಕ್ಷೆಗಳಿಗೆ ಒಳಗಾಗಿದ್ದರು. ಇದಾಗಲೇ ಲಲಿತಾ ಸಾಳ್ವೆ ತಮ್ಮ ಹೆಸರನ್ನು ಲಲಿತ್ ಕುಮಾರ್ ಎಂದು ಬದಲಿಸಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು ಬಳಿಕ ಅವರನ್ನು ಐಸಿಯುಗೆ ರವಾನಿಸಲಾಗಿದೆ. ಅಲ್ಲಿ ಅವರಿನ್ನೂ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.
ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದಂತೆ ಇದೊಂದು ಸಂಕೀರ್ಣ ಹಾಗೂ ಅತಿ ಸೂಕ್ಷ್ಮ ಶಸ್ತ್ರಚಿಕಿತ್ಸೆಯಾಗಿತ್ತು. "ಅವರ ದೇಹಾರೋಗ್ಯ ಸಾಮಾನ್ಯವಾಗಿದೆ. ಅವರನ್ನೀಗ ವೈದ್ಯರ ನಿಗಾದಲ್ಲಿಡಲಾಗಿದ್ದು ಕನಿಷ್ಠ ಮೂರು ದಿನಗಳವರೆಗೆ ಯಾರ ಭೇಟಿಗೆ ಅವಕಾಶವಿರುವುದಿಲ್ಲ. ಅವರು ಸುಮಾರು ಒಂದು ವಾರದವರೆಗೆ ಆಸ್ಪತ್ರೆಯಲ್ಲಿ ಉಳಿಯುವ ಸಾಧ್ಯತೆ ಇದೆ." ಮಾದ್ಯಮಗಳಿಗೆ ಅಧಿಕಾರಿಯು ತಿಳಿಸಿದ್ದಾರೆ.
ಮಾಜಿ ಮಹಿಳಾ ಪೋಲೀಸ್ ಪೇದೆ ಲಲಿತಾ ಕುಮಾರಿ ಸಾಳ್ವೆ(28), ಮೇ 2010 ರಲ್ಲಿ ಮಹಾರಾಷ್ಟ್ರ ಪೋಲೀಸ್ ಸೇವೆಗೆ ಸೇರ್ಪಡೆಯಾಗಿದ್ದರು. ಅವರು ಬಿಡ್ ಜಿಲ್ಲೆ ಮುಜಲ್ಗಾಂವ್ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com