ಸಾಂದರ್ಭಿಕ ಚಿತ್ರ
ದೇಶ
ತೆಲಂಗಾಣದಲ್ಲಿ ಭೀಕರ ಸರಣಿ ಅಪಘಾತ 10 ಸಾವು, 30 ಮಂದಿಗೆ ಗಾಯ
ತೆಲಂಗಾಣದ ಸಿದ್ದಿಪೇಟೆಯ ರಿಮ್ಮನ ಗುಡ್ಡದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ...
ಸಿದ್ದಿಪೇಟೆ: ತೆಲಂಗಾಣದ ಸಿದ್ದಿಪೇಟೆಯ ರಿಮ್ಮನ ಗುಡ್ಡದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಮತ್ತು 30ಕ್ಕೂ ಹೆಚ್ಚು ಗಾಯ ಗಾಯಗೊಂಡಿದ್ದಾರೆ.
ಇಂದು ಸಂಜೆ ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್ಸು ಹಾಗೂ ಲಾರಿ ಸಹಿತ ನಾಲ್ಕು ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ.
ಬಸ್ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಈ ಸರಣಿ ಅವಘಡ ಸಂಭವಿಸಿದೆ. ಪಲ್ಟಿ ಹೊಡೆದ ಬಸ್ಸಿಗೆ ಕಾರು ಮತ್ತು ಟೆಂಪೋ ಡಿಕ್ಕಿ ಹೊಡೆದಿವೆ ಎಂದು ಗಜ್ವಾಲ್ ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಗಜ್ವಾಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದ್ದಾರೆ.
ಸ್ಥಳೀಯರು ಮತ್ತು ಪೊಲೀಸರು ಅಪಘಾತದ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ