ದೆಹಲಿ- ಮೀರತ್ ಎಕ್ಸ್ ಪ್ರೆಸ್ ವೇ ಮೊದಲ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ದೆಹಲಿ- ಮೀರತ್ ಎಕ್ಸ್ ಪ್ರೆಸ್ ವೇ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿಂದು ಉದ್ಘಾಟಿಸಿದರು. ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಪ್ರಧಾನಿ ನರೇಂದ್ರ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ: ದೆಹಲಿ- ಮೀರತ್  ಎಕ್ಸ್ ಪ್ರೆಸ್ ವೇ  ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ  ದೆಹಲಿಯಲ್ಲಿಂದು  ಉದ್ಘಾಟಿಸಿದರು.  ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೆಹಲಿಯ ನಿಜಾಮುದ್ದೀನ್  ಸೇತುವೆಯಿಂದ  ಉತ್ತರ ಪ್ರದೇಶದ ಗಡಿಯವರೆಗೂ  ನಿರ್ಮಾಣವಾಗಿರುವ  14 ಪಥದ ಈ  ಹೆದ್ದಾರಿಯಿಂದ  ಎರಡು ನಗರದ ಪ್ರಯಾಣದ ಅವಧಿ ಕಡಿಮೆಯಾಗಲಿದೆ.  ಪ್ರಸ್ತುತ 45 ನಿಮಿಷಗಳಲ್ಲಿ ಸಂಪರ್ಕಿಸಬಹುದಾಗಿದೆ. ಮೊದಲು ನಾಲ್ಕರಿಂದ ಐದು ಗಂಟೆ ಅಗತ್ಯವಾಗಿತ್ತು.

ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರಧಾನಿ ನರೇಂದ್ರಮೋದಿ, ಹೆದ್ದಾರಿಯಲ್ಲಿ ರೋಡ್ ಶೋ ನಡೆಸಿದರು.  ರೋಡ್ ಶೋ ವೇಳೆಯಲ್ಲಿ ರಸ್ತೆಯ ಇಕ್ಕೆಲ್ಲಗಳಲ್ಲಿ ಅಪಾರ ಸಂಖ್ಯೆಯ ಸಾರ್ವಜನಿಕರು ನೆರೆದಿದ್ದರು.
ಈ ಯೋಜನೆಯಿಂದ  ದೆಹಲಿ ಹಾಗೂ ಮೀರತ್ ಗೆ  ಕ್ಷಿಪ್ರ ಹಾಗೂ ಸುರಕ್ಷಿತವಾಗಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.ಉತ್ತರ ಪ್ರದೇಶ, ಉತ್ತರ ಖಂಡ್,  ರಾಜ್ಯಗಳ ಜನರು ಈ ಯೋಜನೆಯಿಂದ ಅನುಕೂಲ ಪಡೆಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com