ಉತ್ತರ ಪ್ರದೇಶ ಉಪಚುನಾವಣೆ : ಇವಿಎಂ ದೋಷದ ಬಗ್ಗೆ ಎಸ್ .ಪಿ. ಆರ್ ಎಲ್ ಡಿ ಪ್ರಶ್ನೆ
ಕೈರಾನಾ ಲೋಕಸಭಾ ಹಾಗೂ ನೂರ್ ಪುರ್ ವಿಧಾನಸಭಾ ಉಪಚುನಾವಣೆ ಪ್ರಗತಿಯಲ್ಲಿದ್ದು, ಕೆಲವು ಕಡೆಗಳಲ್ಲಿ ವಿದ್ಯುನ್ಮಾನ ಮಂತ್ರಗಳಲ್ಲಿ ದೋಷ ಕಂಡುಬಂದಿವೆ ಎಂದು ಸಮಾಜವಾದಿ ಹಾಗೂ ರಾಷ್ಟ್ರೀಯ ಲೋಕ ದಳ ಪಕ್ಷಗಳು ಆರೋಪಿಸಿವೆ.
ಉತ್ತರ ಪ್ರದೇಶ : ಕೈರಾನಾ ಲೋಕಸಭಾ ಹಾಗೂ ನೂರ್ ಪುರ್ ವಿಧಾನಸಭಾ ಉಪಚುನಾವಣೆ ಪ್ರಗತಿಯಲ್ಲಿದ್ದು, ಕೆಲವು ಕಡೆಗಳಲ್ಲಿ ವಿದ್ಯುನ್ಮಾನ ಮಂತ್ರಗಳಲ್ಲಿ ದೋಷ ಕಂಡುಬಂದಿವೆ ಎಂದು ಸಮಾಜವಾದಿ ಹಾಗೂ ರಾಷ್ಟ್ರೀಯ ಲೋಕ ದಳ ಪಕ್ಷಗಳು ಆರೋಪಿಸಿವೆ.
ಇವಿಎಂ ಹಾಗೂ ವಿವಿಪ್ಯಾಟ್ ದೋಷದ ಬಗ್ಗೆ ಕೈರಾನಾ ಕ್ಷೇತ್ರದ ಆರ್ ಎಲ್ ಡಿ ಅಭ್ಯರ್ಥಿ ತಬ್ ಸಮ್ ಹಸನ್ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಇವಿಎಂ ದೋಷದಿಂದಾಗಿ ಮತದಾರರು ತಮ್ಮ ಹಕ್ಕು ಚಲಾಯಿಸದಂತಾಗಿದೆ, ಕೂಡಲೇ ತಂತ್ರಜ್ಞರನ್ನು ಕರೆಯಿಸಿ ಸರಿಮಾಡುವಂತೆ ಚುನಾವಣಾ ಆಯೋಗವನ್ನು ಅವರು ಆಗ್ರಹಿಸಿದ್ದಾರೆ.