ನೀರಿನ ಲೋಟಕ್ಕೆ ಎಂಜಲು ಉಗುಳಿ ನಾಗರಿಕ ನ್ಯಾಯಾಧೀಶೆಗೆ ಕೊಟ್ಟ ಸಹಾಯಕ ನೌಕರ!

ನಾಗರಿಕ ನ್ಯಾಯಾಧೀಶೆಗೆ ಕುಡಿಯಲು ಕೊಟ್ಟ ನೀರಿನ ಗ್ಲಾಸಿಗೆ ಎಂಜಲು ಉಗುಳಿ ಕೊಟ್ಟಿರುವ ವಿಲಕ್ಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿಗಢದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ...
ಸಹಾಯಕ ನೌಕರ ವಿಕಾಸ್ ಗುಪ್ತಾ
ಸಹಾಯಕ ನೌಕರ ವಿಕಾಸ್ ಗುಪ್ತಾ
ಆಗ್ರಾ: ನಾಗರಿಕ ನ್ಯಾಯಾಧೀಶೆಗೆ ಕುಡಿಯಲು ಕೊಟ್ಟ ನೀರಿನ ಗ್ಲಾಸಿಗೆ ಎಂಜಲು ಉಗುಳಿ ಕೊಟ್ಟಿರುವ ವಿಲಕ್ಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿಗಢದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ತನಿಖಗೆ ಆದೇಶಿಸಿದ್ದಾರೆ. 
ಮೇಲಾಧಿಕಾರಿಯ ಕುಡಿಯುವ ನೀರಿಗೆ ಎಂಜಲು ಉಗುಳಿದ ವಿಡಿಯೋ ಇದೀಗ ವೈರಲ್ ಆಗಿದ್ದು ವಾರದ ಬಳಿಕ ನೌಕರನ ಕೃತ್ಯ ಬಯಲಿಗೆ ಬಂದಿದೆ. ಈ ಸಂಬಂಧ ನಾಲ್ಕನೇ ದರ್ಜೆ ನೌಕರ ವಿಕಾಸ್ ಗುಪ್ತಾರನ್ನು ಕೂಡಲೇ ಕೆಲಸದಿಂದ ಅಮಾನತು ಮಾಡಲಾಗಿದೆ. 
ಮೂಲಗಳ ಪ್ರಕಾರ, ನೌಕರ ಕೆಲಸದ ಬಗ್ಗೆ ಅನುಮಾನಗೊಂಡಿದ್ದ ನಾಗರಿಕ ನ್ಯಾಯಾಧೀಶೆ ಆತನ ಚಲನವಚನವನ್ನು ಗಮನಿಸುವ ಸಲುವಾಗಿ ಕಚೇರಿಯಲ್ಲಿ ಸಿಸಿಟಿವಿಯನ್ನು ಹಾಕಿಸಿದ್ದರು. ಇದರಲ್ಲಿ ವಿಕಾಸ್ ಗುಪ್ತಾ ತನ್ನ ಮೇಲಾಧಿಕಾರಿಗೆ ಕುಡಿಯಲು ನೀರು ಕೊಡುವ ಮುನ್ನ ಅದರಲ್ಲಿ ಎಂಜಲು ಉಗುಳಿರುವುದು ಸೆರೆಯಾಗಿತ್ತು. ಇದನ್ನೇ ಸಾಕ್ಷಿಯಾಗಿ ತನ್ನ ಮೇಲಾಧಿಕಾರಿಗಳಿಗೆ ನ್ಯಾಯಾಧೀಶೆ ಕೊಟ್ಟಿದ್ದಾರೆ. 
ಈ ವಿಡಿಯೋ ಆಧಾರದ ಮೇಲೆ ಸದ್ಯಕ್ಕೆ ವಿಕಾಸ್ ಗುಪ್ತನನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ಬಳಿಕ ಆತನ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿ ಪಿಕೆ ಸಿಂಗ್ ಹೇಳಿದ್ದಾರೆ. 
ಈ ಪ್ರಕರಣ ಸಂಬಂಧ ಯೂನಿಯನ್ ಅಧ್ಯಕ್ಷ ಉಮಾಶಂಕರ್ ಯಾದವ್ ವಿಕಾಸ್ ಗುಪ್ತಾ ವಿರುದ್ಧ ಕೈಗೊಂಡಿರುವ ಕ್ರಮ ಸಂಪೂರ್ಣವಾಗಿ ತಪ್ಪ ಮತ್ತು ಸ್ವೀಕಾರಾರ್ಹವಲ್ಲ. ಕಳೆದ ಎರಡು ತಿಂಗಳಿನಿಂದ ಆತ ಕಿರುಕುಳಕ್ಕೊಳಗಾಗಿದ್ದರಿಂದ ಗುಪ್ತಾರ ಮಾನಸಿಕ ಸ್ಥಿತಿ ಸರಿಯಾಗಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com