ಪಿಡಬ್ಲ್ಯೂಡಿ ಅಕ್ರಮ: ದೆಹಲಿ ಸಚಿವರ ಮನೆ ಮೇಲೆ ಸಿಬಿಐ ದಾಳಿ

ದೆಹಲಿ ಸರ್ಕಾರದ ಸಚಿವರಾದ ಸತ್ಯೇಂದರ್ ಜೈನ್ ವಿರುದ್ದ ಕೇಂದ್ರೀಯ ತನಿಖಾ ದಳ(ಸಿಬಿಐಅ) ಪ್ರಕರಣ ದಾಖಲಿಸಿಕೊಂಡಿದೆ,
ಸತ್ಯೇಂದರ್ ಜೈನ್
ಸತ್ಯೇಂದರ್ ಜೈನ್
ನವದೆಹಲಿ: ದೆಹಲಿ ಸರ್ಕಾರದ ಪಿಡಬ್ಲ್ಯೂಡಿ ಸಚಿವರಾದ ಸತ್ಯೇಂದರ್ ಜೈನ್ ವಿರುದ್ದ ಕೇಂದ್ರೀಯ ತನಿಖಾ ದಳ(ಸಿಬಿಐ) ಪ್ರಕರಣ ದಾಖಲಿಸಿಕೊಂಡಿದೆ, ಬುಧವಾರ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ಜೈನ್ ಅವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಪಿಡಬ್ಲ್ಯೂಡಿ ನೇಮಕಾತಿ ಅಕ್ರಮ ಸಂಬಂಧ ಈ ದಾಳಿ ನಡೆದಿದೆ. 2017ರಲ್ಲಿ  ಒಟ್ಟು 24 ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲಾಗಿದ್ದು  ಅವರುಗಳಿಗೆ ಯಾವ ರೀತಿಯ ಅನುಭವವಿಲ್ಲ, ಆದರೆ ದೇಶದ ಅತ್ಯುತ್ತಮ ಆರ್ಕಿಟೆಕ್ಟ್ ಕಾಲೇಜುಗಳಲ್ಲಿ ಕಲಿತು ಬಂದವರೆಂದು ಹೇಳಿ ಹುದ್ದೆಗೆ ಇವರನ್ನು ಅಕ್ರಮವಾಗಿ ನೇಮಕ ಮಾಡಿಕೊಲ್ಳಲಾಗಿದೆ ಎಂದು ಸಿಬಿಐ ಆರೋಪಿಸಿದೆ
ಈ ಕುರಿತಂರೆ ಪ್ರತಿಕ್ರಯಿಸಿರುವ ಸಚಿವ ಜೈನ್ ಪಿಡಬ್ಲ್ಯೂಡಿ ನಿಂದ  ಸೃಜನಶೀಲ ತಂಡವನ್ನು ನೇಮಕ ಮಾಡಿದ್ದ ಸಂಬಂಧ ನನ್ನ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. .ವಿವಿಧ ಯೋಜನೆಗಳಿಗೆ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಸಿಬಿಐ ಇದೀಗ ಅವರೆಲ್ಲರನ್ನೂ ಬಲವಂತದಿಂದ ಹೊರಹಾಕಿದೆ ಎಂದಿದ್ದಾರೆ.
ಸಾರ್ವಜನಿಕ ಕಾಮಗಾರಿ ಇಲಾಖೆಯ ವಿವಿಧ ಯೋಜನೆಗಳಿಗೆ  ವೃತ್ತಿಪರರನ್ನು ನೇಮಕ ಮಾಡಿಕೊಳ್ಳುವಲ್ಲಿ ಅಕ್ರಮ ನಡೆದ ಆರೋಪದ ಮೇಲೆ ಸಿಬಿಐಅ ದೆಹಲಿ ರಾಜ್ಯ ಪಿಡಬ್ಲ್ಯೂಡಿ ಸಚಿವರ ಮನೆ ಮೇಲೆ ಸಿಬಿಐ ದಾಳಿ ನಡೆದಿದೆ. ಎರಡು ವರ್ಷಗಳ ಅವಧಿಕಾಗಿ 24 ವೃತ್ತಿಪರರ ನೇಮಕವನ್ನು ಮಾಡಿಕೊಳ್ಳಲಾಗಿದ್ದು ಇದಕ್ಕೆ 5.74 ಕೋಟಿ ರೂ. ವ್ಯಯವಾಗಿದೆ.
ಈ ಸಂಬಂಧ ಪ್ರತಿಕ್ರಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ "ಮೋದಿ ಏನನ್ನು ಬಯಸುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com