ನಿವೃತ್ತಿ ವಯಸ್ಸು ಹೆಚ್ಚಳ: ಮೂರು ದಿನ ಸಾಮೂಹಿಕ ಸಾಂದರ್ಭಿಕ ರಜೆ ಮೇಲೆ ತೆರಳಿದ 50 ವೈದ್ಯರು

ನಿವೃತ್ತಿ ವಯಸ್ಸನ್ನು 58 ರಿಂದ 65 ವರ್ಷಕ್ಕೆ ಹೆಚ್ಚಿಸಿ ಇತ್ತೀಚಿಗೆ ರಾಜ್ಯಸಚಿವ ಸಂಪುಟದಲ್ಲಿ ಕೈಗೊಂಡಿರುವ ನಿರ್ಧಾರದಿಂದ ಅಸಮಾಧಾನಗೊಂಡಿರುವ ಗಾಂಧಿ ಆಸ್ಪತ್ರೆಯ 50 ಕ್ಕೂ ಹೆಚ್ಚು ಸಿಬ್ಬಂದಿ ಮೂರು ದಿನ ಸಾಮೂಹಿಕ ಸಾಂದರ್ಭಿಕ ರಜೆ ಹಾಕಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದ್ರಾಬಾದ್ : ಸರ್ಕಾರಿ  ವೈದ್ಯಕೀಯ ಪ್ರಾದ್ಯಾಪಕರ ನಿವೃತ್ತಿ ವಯಸ್ಸನ್ನು 58 ರಿಂದ 65 ವರ್ಷಕ್ಕೆ ಹೆಚ್ಚಿಸಿ  ಇತ್ತೀಚಿಗೆ ರಾಜ್ಯಸಚಿವ ಸಂಪುಟದಲ್ಲಿ ಕೈಗೊಂಡಿರುವ ನಿರ್ಧಾರದಿಂದ ಅಸಮಾಧಾನಗೊಂಡಿರುವ  ಇಲ್ಲಿನ ಗಾಂಧಿ ಆಸ್ಪತ್ರೆಯ 50 ಕ್ಕೂ ಹೆಚ್ಚು  ಸಿಬ್ಬಂದಿ  ಮೂರು ದಿನ ಸಾಮೂಹಿಕ  ಸಾಂದರ್ಭಿಕ ರಜೆ ಹಾಕಿದ್ದಾರೆ.

ಆದಾಗ್ಯೂ,  ಆಸ್ಪತ್ರೆಗೆ ಬಂದ ರೋಗಿಗಳು ಹೆಚ್ಚಿನ ಹೊತ್ತು ಕಾಯದಂತೆ ಹಾಗೂ ಅವರಿಗೆ ಚಿಕಿತ್ಸೆ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ   ಪ್ರೋಫೆಸರ್,  ಕಿರಿಯ ವೈದ್ಯರು ಮತ್ತು ಹೌಸ್ ಸರ್ಜನ್  ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ.

ಕಿರಿಯ ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಹೊರ ರೋಗಿಗಳ  ಚಿಕಿತ್ಸೆಗೆ ತೊಂದರೆಯಾಗುವ ಶಂಕೆಯ ಹಿನ್ನೆಲೆಯಲ್ಲಿ  ಕಿರಿಯ ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳದಂತೆ  ಇಲಾಖಾ ಮುಖ್ಯಸ್ಥರು ಸೂಚನೆ ನೀಡಿದ್ದಾರೆ.

ಸಹವರ್ತಿ ಪ್ರಾಧ್ಯಾಪಕರನ್ನು 7 ವರ್ಷಗಳ ಕಾಲ ಮುಂದುವರೆಸಿರುವುದರಿಂದ ಬಡ್ತಿಯನ್ನು ಕಿತ್ತುಕೊಳ್ಳಲಾಗುತ್ತದೆ ಮತ್ತು  ಹೊಸ ಪದವಿಧರರಿಗೆ ಉದ್ಯೋಗವನ್ನು ನಿರಾಕರಿಸಲಾಗುತ್ತಿದೆ ಎಂದು  ಮುಷ್ಕರ ನಿರತ ಪ್ರಾಧ್ಯಾಪಕರು ಹೇಳಿದ್ದಾರೆ.

ನಿವೃತ್ತಿ ವಯಸ್ಸು ಹೆಚ್ಚಳ ಹಿನ್ನೆಲೆಯಲ್ಲಿ ಗಾಂಧಿ ಆಸ್ಪತ್ರೆಯಲ್ಲಿನ ಸಿಬ್ಬಂದಿಯಲ್ಲಿಯೇ ಎರಡು ಬಣ ಉಂಟಾಗಿತ್ತು.  ನಿವೃತ್ತಿ ವಯಸ್ಸು ಹೆಚ್ಚಳದ ಪರವಾಗಿರುವ ಪ್ರಾಧ್ಯಾಪಕರು  ತೆಲಂಗಾಣ ಸರ್ಕಾರಿ ವೈದ್ಯಕೀಯ ಪ್ರಾಧ್ಯಾಪಕರ ಸಂಘವನ್ನು  ಕಟ್ಟಿಕೊಂಡಿದ್ದು,   ನಿನ್ನೆ ಸಂಜೆ ನಡೆದ ಸಭೆಯ ಸಂದರ್ಭದಲ್ಲಿ ಪರ ಹಾಗೂ ವಿರುದ್ಧ ಸಂಘಗಳ ನಡುವೆ  ಗಲಾಟೆ ನಡೆದಿದೆ.
ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಗಾಂಧಿ ಆಸ್ಪತ್ರೆಯಲ್ಲಿನ 50 ಸಿಬ್ಬಂದಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ. ಆದಾಗ್ಯೂ, ಕಿರಿಯ ವೈದ್ಯರು, ಹೌಸ್ ಸರ್ಜನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ  ಎಂದು  ಟಿಜಿಎಂಪಿಎ ಸದಸ್ಯರು ಹೇಳಿದ್ದಾರೆ.  ಆಸ್ಪತ್ರೆಯ ಸೂಪರಿಟೆಂಡ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com