ನಂದನ್ ನೀಲೇಕಣಿ
ನಂದನ್ ನೀಲೇಕಣಿ

ತಮ್ಮ ಸಂಪತ್ತಿನ ಅರ್ಧಕ್ಕಿಂತಲೂ ಹೆಚ್ಚು ಭಾಗವನ್ನು ದಾನ ಮಾಡಲು ನೀಲೇಕಣಿ ದಂಪತಿ ನಿರ್ಧಾರ

ಇನ್ಫೋಸಿಸ್ ಸಹ ಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನೀಲೇಕಣಿ ಮತ್ತು ಅವರ ಪತ್ನಿ ರೋಹಿಣಿ ನೀಲೇಕಣಿ ...
Published on

ನವದೆಹಲಿ: ಇನ್ಫೋಸಿಸ್ ಸಹ ಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನೀಲೇಕಣಿ ಮತ್ತು ಅವರ ಪತ್ನಿ ರೋಹಿಣಿ ನೀಲೇಕಣಿ ತಮ್ಮ ಸಂಪತ್ತಿನ ಅರ್ಧಕ್ಕಿಂತಲೂ ಹೆಚ್ಚಿನ ಭಾಗವನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

ಲೋಕೋಪಕಾರಿಗಳಾದ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಹಾಗೀ ವಾರ್ರನ್ ಬಫೆಟ್ ನಿರ್ಮಿಸಿರುವ ಲೋಕೋಪಕಾರಿ ಅಭಿಯಾನಕ್ಕೆ ಭಾರತದ ಇತರ ಕೆಲ ಶತಕೋಟಿದಾರರು ಸೇರಿಕೊಂಡಿದ್ದಾರೆ.

ನೀಲೇಕಣಿ ದಂಪತಿ ಜೊತೆಗೆ ಅನೀಲ್ ಮತ್ತು ಅಲ್ಲಿಸನ್ ಭುಸ್ರಿ, ಶಂಶೀರ್ ಮತ್ತು ಶಬೀನಾ ವಯಲಿಲ್, ಬಿ.ಆರ್,ಶೆಟ್ಟಿ ಮತ್ತು ಅವರ ಪತ್ನಿ ಚಂದ್ರಕುಮಾರಿ ರಘುರಾಮ್ ಶೆಟ್ಟಿ ಸೇರಿದಂತೆ 14ಮಂದಿ ತಮ್ಮ ಸಂಪತ್ತನ್ನು ಲೋಕೋಪಕಾರಕ್ಕೆ ಹಂಚಲು ತೀರ್ಮಾನಿಸಿದ್ದಾರೆ.

ಈ ಲೋಕೋಪಕಾರಕ್ಕಾಗಿ ತಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನು ಗಿರವಿ ನೀಡುವ ಅಭಿಯಾನ 2010ರಲ್ಲಿ 40 ಅಮೆರಿಕನ್ನರಿಂದ ಆರಂಭವಾಯಿತು. 22 ದೇಶಗಳಿಂದ ಒಟ್ಟು 183 ಮಂದಿ ಇಂದು ತಮ್ಮ ಸಂಪತ್ತಿನ ಕೆಲ ಭಾಗವನ್ನು ನೀಡಲು ಮುಂದಾಗಿದ್ದಾರೆ.

ಬಿಲ್ ಗೇಟ್ಸ್, ಮಿಲಿಂದಾ ಗೇಟ್ಸ್ ಮತ್ತು ವಾರ್ರನ್ ಬಫೆಟ್ ಅವರು ಸ್ಥಾಪಿಸಿರುವ ಈ ಚಾರಿಟೇಬಲ್ ಗೆ ಅತಿ ಶ್ರೀಮಂತರು ತಮ್ಮ ಜೀವಿತಾವಧಿಯಲ್ಲಿ ಅಥವಾ ಮುಂದೆ ವಿಲ್ ಬರೆದು ಸಂಪತ್ತಿನ ಕೆಲ ಭಾಗವನ್ನು ದಾನ ಮಾಡುವುದಾಗಿರುತ್ತದೆ.

ಕಳೆದ ಎಂಟು ವರ್ಷಗಳಲ್ಲಿ ಅನೇಕರು ನಮ್ಮ ಲೋಕೋಪಕಾರಿ ಚಾರಿಟೇಬಲ್ ಗೆ ಸೇರಿದ್ದು, ತಮ್ಮ ಸಂಪತ್ತಿನ ಕೆಲ ಭಾಗವನ್ನು ಹಂಚುವ ಮೂಲಕ ವಿಶ್ವದಲ್ಲಿ ಬಡವರ ಸಂಖ್ಯೆಯನ್ನು ತಗ್ಗಿಸಲು ಮುಂದಾಗಿದ್ದಾರೆ ಎಂದರು.

ನೀಲೇಕಣಿ ದಂಪತಿ ಪ್ರಾಥಮಿಕ ಶಾಲೆಯ ಮಕ್ಕಳ ಕಲಿಕೆಗಾಗಿ ಏಕ್ ಸ್ಟೆಪ್ ಎಂಬ ಸಂಘಟನೆಯನ್ನು ಕೂಡ ಹುಟ್ಟುಹಾಕಿದ್ದಾರೆ. ರೋಹಿಣಿ ನೀಲೇಕಣಿ ದೇಶಾದ್ಯಂತ ಸ್ಥಿರ ಜಲ ಮತ್ತು ಸ್ವಚ್ಛತೆಗಾಗಿ ಹಣ ಒದಗಿಸುವ ಆರ್ಗ್ಯಮ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.
ನೀಲೇಕಣಿ ದಂಪತಿ ತಮ್ಮ ಸಂಪತ್ತನ್ನು ದಾನ ಮಾಡುವ ಪ್ರತಿಜ್ಞೆ ನೀಡುವಾಗ ಭಗವದ್ಗೀತೆಯ ಸಾಲನ್ನು ಉಲ್ಲೇಖಿಸಿದ್ದಾರೆ.

X

Advertisement

X
Kannada Prabha
www.kannadaprabha.com