ಆರ್'ಎಸ್ಎಸ್ ಕಾರ್ಯಕ್ರಮಕ್ಕೆ ಪ್ರಣಬ್ ಮುಖರ್ಜಿ ಭೇಟಿಯಿಂದ ಯಾವುದೇ ಸಮಸ್ಯೆಯಿಲ್ಲ; ಶಿವಸೇನೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್)ದ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಭೇಟಿಯಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಶಿವಸೇನೆ ಗುರುವಾರ ಹೇಳಿದೆ...
ಶಿವಸೇನೆ ವಕ್ತಾರ ಸಂಜಯ್ ರಾವತ್
ಶಿವಸೇನೆ ವಕ್ತಾರ ಸಂಜಯ್ ರಾವತ್
Updated on: 
ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್)ದ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಭೇಟಿಯಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಶಿವಸೇನೆ ಗುರುವಾರ ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್ ಅವರು, ನಾಗ್ಪುರದಲ್ಲಿ ನಡೆಯಲಿರುವ ಆರ್'ಎಸ್ಎಸ್ ಸಮಾರಂಭಕ್ಕೆ ಪ್ರಣಬ್ ಮುಖರ್ಜಿ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಪ್ರಣಬ್ ಮುಖರ್ಜಿಯವರು ಸ್ವೀಕರಿಸಿದ್ದು, ಇದರಿಂದ ಯಾವುದೇ ರೀತಿಯ ವಿವಾದಗಳಿಲ್ಲ ಎಂದು ಹೇಳಿದ್ದಾರೆ. 
ಈ ಹಿಂದೆ ಪಾಕಿಸ್ತಾನಕ್ಕೆ ತೆರಳಿದ್ದ ಮಣಿ ಸಂಕರ್ ಐಯ್ಯರ್ ಅವರು ಭಾರತದ ವಿರುದ್ಧ ಮಾತನಾಡಿದ್ದರು. ಇದಲ್ಲದೆ. ಕಾಂಗ್ರೆಸ್ ಸದಸ್ಯರೂ ಕೂಡ ಹುರಿಯತ್ ಕುರಿತಂತೆ ಮಾತನಾಡಿದ್ದರು. ಕೆಲವರಿಗೆ ಆರ್"ಎಸ್ಎಸ್ ಜೊತೆಗೆ ಸೈದ್ಧಾಂತಿಕ ಭಿನ್ನತೆಗಳಿರಬಹುದು. ಆದರೆ, ಆರ್"ಎಸ್ಎಸ್ ರಾಷ್ಟ್ರೀಯವಾದಿ ಸಂಘಟನೆಯಾಗಿದೆ. ಮಾಜಿ ರಾಷ್ಟ್ರಪತಿಗಳನ್ನು ಅವರು ಆಹ್ವಾನಿಸಿದ್ದೇ ಆಗಿದ್ದರೆ, ಅದರಲ್ಲಿ ಯಾವುದೇ ರೀತಿಯ ವಿವಾದಗಳು ಏಳುವುದಿಲ್ಲ ಎಂದು ತಿಳಿಸಿದ್ದಾರೆ. 
ಸಮಾಜ ಕಲ್ಯಾಣಕ್ಕಾಗಿ ಆರ್'ಎಸ್ಎಸ್ ಕೊಡುಗೆಗಳನ್ನು ನೀಡಿದೆ. ಈ ರೀತಿಯ ಚರ್ಚೆಗಳಿಗೆ ಯಾವುದೇ ರೀತಿಯ ಅರ್ಥವಿಲ್ಲ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com