ಬೆಂಗಳೂರು: ನವೆಂಬರ್ 1 ನ್ನು ಬಾಲ್ಯವಿವಾಹ ವಿರೋಧಿ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಮಕ್ಕಳ ಹಕ್ಕುಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲ ಅವರನ್ನು ಭೇಟಿ ಮಾಡಿ ನ.1 ನ್ನು ಬಾಲ್ಯವಿವಾಹ ವಿರೋಧಿ ದಿನವನ್ನಾಗಿ ಘೋಷಣೆ ಮಾಡಬೇಕೆಂಬ ಮನವಿ ಸಲ್ಲಿಸುವುದಾಗಿ ಮಕ್ಕಳ ಹಕ್ಕುಗಳ ಕಾರ್ಯಕರ್ತ ನರಸಿಂಹ ಜಿ ರಾವ್ ಹೇಳಿದ್ದಾರೆ. ಇದೇ ವೇಳೆ ಯು
ಎನ್ ಐ ಸಿಇಎಫ್ ನ ಅಂಕಿ ಅಂಶಗಳ ಪ್ರಕಾರ 2015-16 ಸಾಲಿನಲ್ಲಿ 18 ನೇ ವಯಸ್ಸಿಗಿಂತ ಮುನ್ನವೇ ವಿವಾಹವಾಗುತ್ತಿರುವವರ ಯುವತಿಯರ ಸಂಖ್ಯೆ ರಾಜ್ಯದಲ್ಲಿ ಶೇ.21.4 ರಷ್ಟಾಗಿದೆ.
2006 ರ ನ.1 ರಂದು ಬಾಲ್ಯವಿವಾಹ ರದ್ದತಿ ಕಾಯ್ದೆ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ನ.1 ರಂದು ನವೆಂಬರ್ 1 ನ್ನು ಬಾಲ್ಯವಿವಾಹ ವಿರೋಧಿ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ನರಸಿಂಹ ಜಿ ರಾವ್ ಆಗ್ರಹಿಸಿದ್ದಾರೆ.