ಸಾಜಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲೆಂದು ಪೊಲೀಸ್ ಠಾಣೆಗೆ ಹೋದಾಗ ಅಪರಿಚಿತ ಶವವೊಂದು ಸಿಕ್ಕಿರುವ ಬಗ್ಗೆ ಪೊಲೀಸರು ಹೇಳಿದ್ದರು. ಶವದ ಕಾಲ ಮೇಲೆ ಸರ್ಜರಿ ಮಾಡಿದ ಗುರುತಿತ್ತು. ನನ್ನ ಅಣ್ಣನಿಗೂ ಕಾಲಿನ ಸರ್ಜರಿಯಾಗಿತ್ತು. ಶವ ಹತ್ತಿರ ಬಿದ್ದಿದ್ದ ಚಪ್ಪಲಿ ಮತ್ತು, ಮೃತನ ಶರೀರದ ಮೇಲಿದ್ದ ಬಟ್ಟೆಗಳು ಸಹ ತನ್ನ ಅಣ್ಣ ಸಾಜಿಯದ್ದನ್ನೇ ಹೋಲುತ್ತಿದ್ದವು. ಹೀಗಾಗಿ ಮೃತ ದೇಹ ಅಣ್ಣನದೇ ಇರಬೇಕೆಂದು ಭಾವಿಸಿದೆ ಎಂದು ಸಾಜಿ ಸಹೋದರ ಹೇಳಿದ್ದಾನೆ.