ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ; ಕ್ಯಾಮರಾಮನ್ ಸತ್ತಿದ್ದು ದಾಳಿಗೆ ಸಿಲುಕಿ: ನಕ್ಸಲರು

ಛತ್ತೀಸ್ಗಢ ದಂತೇವಾಡದಲ್ಲಿ ನಡೆಸಲಾದ ದಾಳಿ ಕುರಿತಂತೆ ನಕ್ಸಲರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ...
ದಂತೇವಾಡ ನಕ್ಸಲ್ ದಾಳಿ
ದಂತೇವಾಡ ನಕ್ಸಲ್ ದಾಳಿ
Updated on
ನವದೆಹಲಿ: ಛತ್ತೀಸ್ಗಢ ದಂತೇವಾಡದಲ್ಲಿ ನಡೆಸಲಾದ ದಾಳಿ ಕುರಿತಂತೆ ನಕ್ಸಲರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ. 
ಕೆಲ ದಿನಗದಳ ಹಿಂದಷ್ಟೇ ಛತ್ತೀಸ್ಗಢದ ದಂತೇವಾಡದಲ್ಲಿ ನಕ್ಸಲರು ಭೀಕರ ದಾಳಿ ನಡೆಸಿದ್ದರು. ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದರು ಅಲ್ಲದೆ, ದೂರದರ್ಶನದ ಕ್ಯಾಮೆರಾಮೆನ್ ಅಚ್ಯುತಾನಂದನ್ ಸಾಹು ಎಂಬುವವರು ಮೃತಪಟ್ಟಿದ್ದರು. 
ಘಟನೆ ಕುರಿತಂತೆ ಇದೀಗ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ನಕ್ಸಲರು) ಎರಡು ಪುಟಗಳ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರತೀನಿತ್ಯ ನಮ್ಮ ಗ್ರಾಮದ ಮೇಲೆ ದಾಳಿ ನಡೆಯುತ್ತಲೇ ಇರುತ್ತದೆ. ಸ್ಥಳೀಯರನ್ನು ಥಳಿಸಲಾಗುತ್ತಿರುತ್ತದೆ. ನಕಲಿ ಎನ್'ಕೌಂಟರ್ ಗಳಲ್ಲಿ ಜನರನ್ನು ಹತ್ಯೆ ಮಾಡುತ್ತಿರುತ್ತಾರೆ. ಜನರ ಮೇಲೆ ನಕಲಿ ಪ್ರಕರಣಗಳನ್ನು ದಾಖಲಿಸುತ್ತಾರೆ. ಕೆಲವರನ್ನು ಇಲ್ಲಸಲ್ಲದ ಆರೋಪದ ಬಂಧನಕ್ಕೊಳಪಡಿಸುತ್ತಾರೆ. ನಂತರ ಮಾಧ್ಯಮಗಳ ಮುಂದೆ ನಕ್ಸಲರು ಎಂದು ಹೇಳುತ್ತಾರೆ. ರಾಜಕೀಯ ಪಕ್ಷಗಳು ಮಾಧ್ಯಮಗಳನ್ನು ತಪ್ಪು ಹಾದಿಗೆಳೆಯುತ್ತಿವೆ ಎಂದು ಹೇಳಿದೆ. 
ಬಳಿಕ ದಾಳಿ ಕುರಿತಂತೆ ಮಾತನಾಡಿರುವ ನಕ್ಸಲರು, ಪ್ರತೀ ದಿನದಂತೆ ದಾಳಿ ನಡೆದ ದಿನ ಕೂಡ ನಮ್ಮ ಮೇಲೆ ದಾಳಿ ನಡೆಸಲು ಪೊಲೀಸರು ಯತ್ನ ನಡೆಸಿದ್ದರು. ತಂಡದಲ್ಲಿ ದೂರದರ್ಶನ ತಂಡ ಕೂಡ ಇರುತ್ತದೆ ಎಂಬುದು ನಮಗೆ ಗೊತ್ತಿರಲಿಲ್ಲ. ಹೀಗಾಗಿ ದಾಳಿಯಲ್ಲಿ ಅಚ್ಯುತಾನಂದ್ ಸಾಹು ಅವರು ಸಾವನ್ನಪ್ಪಿದ್ದಾರೆ. ಉದ್ದೇಶಪೂರ್ವಕವಾಗಿ ನಾವು ಎಂದಿಗೂ ಯಾವುದೇ ಪತ್ರಕರ್ತರನ್ನು ಹತ್ಯೆ ಮಾಡಿಲ್ಲ. ಪತ್ರಕರ್ತರು ಪೊಲೀಸರೊಂದಿಗೆ ಇರಬಾರದೆಂದು ನಾವು ಮನವಿ ಮಾಡಿಕೊಳ್ಳುತ್ತೇನೆ. ಪ್ರಮುಖವಾಗಿ ಚುನಾವಣೆ ಕರ್ತವ್ಯದ ವೇಳೆ ಜೊತೆಗಿರಬೇಡಿ ಎಂದು ತಿಳಿಸಿದ್ದಾರೆ. 
ಇನ್ನು ನಕ್ಸಲರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದಂತೇವಾಡ ಪೊಲೀಸ್ ಅಧಿಕಾರಿ ಅಭಿಷೇಕ್ ಪಲ್ಲವ್ ಅವರು, ದಾಳಿ ನಡೆಯುವುದಕ್ಕೂ ಮುನ್ನ ಸಾಕ್ಷ್ಯಾಧಾರಗಳು ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿದ್ದವು. ಪತ್ರಕರ್ತರನ್ನು ಹತ್ಯೆ ಮಾಡುವ ಉದ್ದೇಶವಿಲ್ಲದಿದ್ದರೆ, ಕ್ಯಾಮೆರಾವನ್ನೇಕೆ ಹೊತ್ತೊಯ್ದರು? ಪತ್ರಕರ್ತನ ದೇಹದೊಳಗೆ ಹಲವು ಗುಂಡುಗಳು ಹೊಕ್ಕಿದ್ದವು. ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಇದು ತಿಳಿಯದೇ ಅಲ್ಲ, ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿದ್ದು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com