ಸುಪ್ರೀಂ ಕೋರ್ಟ್ ಗೆ 4 ನ್ಯಾಯಾಧೀಶರ ನೇಮಕ, ಇನ್ನೂ ಮೂವರ ಕೊರತೆ

ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ನಾಲ್ಕು ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ನಾಲ್ಕು ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಧ್ಯ ಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ, ತ್ರಿಪುರಾ ಹೈಕೋರ್ಟ್ ನ ಅಜಯ್‌ ರಸ್ತೋಗಿ, ಪಾಟ್ನಾ ಹೈಕೋರ್ಟ್ ನ ಎಂ ಆರ್‌ ಶಾ ಹಾಗೂ ಗುಜರಾತ್‌ ಹೈಕೋರ್ಟ್ ನ ಆರ್‌ ಸುಭಾಷ್‌ ರೆಡ್ಡಿ ಆಯ್ಕೆಯಾದ ನ್ಯಾಯಾಧೀಶರಾಗಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಮದನ್‌ ಬಿ ಲೋಕೂರ್‌ ಹಾಗೂ ಕುರಿಯನ್‌ ಜೋಸೆಫ್‌ ಅವರು ಈ ವರ್ಷ ನಿವೃತ್ತಿಯಾಗುತ್ತಿದ್ದು, ಮತ್ತೊಬ್ಬ ನ್ಯಾಯಾಧೀಶ ಎ ಕೆ ಸಿಕ್ರಿ 2019ರ ಮಾರ್ಚ್ ನಲ್ಲಿ ವಿದಾಯ ಹೇಳಲಿದ್ದಾರೆ.
ಈ ಮೂಲಕ ಸದ್ಯ, ಸುಪ್ರೀಂ ಕೋರ್ಟ್‌ನಲ್ಲಿ ಒಟ್ಟಾರೆ 28 ಮಂದಿ ನ್ಯಾಯಾಧೀಶರು ಕೆಲಸಕ್ಕೆ ಲಭ್ಯರಿದ್ದು, ಇನ್ನೂ ಮೂವರು ನ್ಯಾಯಾಧೀಶರ ಕೊರತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com