ಪಟಾಕಿ ಸಿಡಿಸಿದ ಮಕ್ಕಳನ್ನೂ ಶಿಕ್ಷಿಸಲಾಗುವುದೇ? ಕೇಂದ್ರ ಸಚಿವರ ವಿವಾದಾತ್ಮಕ ಹೇಳಿಕೆ

ಬೆಳಕಿನ ಹಬ್ಬ ದೀಪಾವಳಿಯಂದು ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿರುವ ಅವಧಿಯಲ್ಲಿ ಪಟಾಕಿ ಸಿಡಿಸಿದ ಮಕ್ಕಳನ್ನೂ ಶಿಕ್ಷಿಸಲಾಗುವುದೇ ಎಂದು ಕೇಂದ್ರ ಸಚಿವ ಪಿ. ರಾಧಾಕೃಷ್ಣನ್ ಹೇಳುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ : ಬೆಳಕಿನ ಹಬ್ಬ ದೀಪಾವಳಿಯಂದು ಸುಪ್ರೀಂಕೋರ್ಟ್  ನಿರ್ಬಂಧ ವಿಧಿಸಿರುವ ಅವಧಿಯಲ್ಲಿ ಪಟಾಕಿ ಸಿಡಿಸಿದ ಮಕ್ಕಳನ್ನೂ ಶಿಕ್ಷಿಸಲಾಗುವುದೇ ಎಂದು ಕೇಂದ್ರ ಸಚಿವ ಪಿ. ರಾಧಾಕೃಷ್ಣನ್ ಹೇಳುವ ಮೂಲಕ ವಿವಾದವನ್ನು ಮೈ ಮೇಲೆ  ಎಳೆದುಕೊಂಡಿದ್ದಾರೆ.

 ಕೇಂದ್ರ ಸಚಿವರ ಈ ಹೇಳಿಕೆ ನೀಡುವ ಮೂಲಕ   ಸುಪ್ರೀಂಕೋರ್ಟ್ ಆದೇಶಕ್ಕೆ ಅಗೌರವ ತೋರಿದ್ದಾರೆ  ಎಂದು  ಡಿಎಂಕೆ ಆರೋಪಿಸಿದೆ.

ಯುವಕರು ಮಾತ್ರವಲ್ಲ, ದೇಶಾದ್ಯಂತ ಶೇ, 90 ರಷ್ಚು  ಮಕ್ಕಳು  ಪಟಾಕಿ ಸಿಡಿಸುತ್ತಾರೆ . ಅವರ ಮೇಲೆ ಏನು ಮಾಡುವುದಕ್ಕೆ ಆಗುತ್ತದೆ. ಕಾನೂನು ಹೇರಲು ಸಾಧ್ಯವೇ ? ಎಂದು ರಾಧಾಕೃಷ್ಣನ್ ಇತ್ತೀಚಿಗೆ ಹೇಳಿಕೆ ನೀಡಿದ್ದರು.

ಕ್ರಿಸ್ ಮಸ್  ಆಚರಣೆಗೆ  ಒಂದೂವರೆ ತಿಂಗಳು ಬಾಕಿ ಇರುವಂತೆಯೇ  ಬರುವ ಬೆಳಕಿನ ಹಬ್ಬ ದೀಪಾವಳಿ ಜನರ ಹಬ್ಬವಾಗಿದೆ. ಆಗಲೂ ಕೂಡಾ ಇಂತಹ ನಿರ್ಬಂಧ ಹೇರಲಾಗುತ್ತದೆಯೇ ?
ಸುಪ್ರೀಂಕೋರ್ಟ್ ಆದೇಶ ಅನುಷ್ಠಾನಗೊಳಿಸಲು ಸರ್ಕಾರ ಪ್ರತಿ ಮನೆಗೂ ಪೊಲೀಸರನ್ನು ನೇಮಿಸಬೇಕಾಗುತ್ತದೆ  ಎಂದು ಅವರು ಹೇಳಿದ್ದರು.

ಈ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಡಿಎಂಕೆ ವಕ್ತಾರ ಸಿ. ರವೀಂದ್ರನ್,  ಪೋಷಕರ ಮೇಲ್ವಿಚಾರಣೆಯಲ್ಲಿ ಮಕ್ಕಳು ಪಟಾಕಿ ಸಿಡಿಸುತ್ತಾರೆ.  ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್  ಒಳ್ಳೆಯ ತೀರ್ಪು ನೀಡಿದೆ.  ಆ ತೀರ್ಪನ್ನು ಎಲ್ಲರೂ ಸ್ವಾಗತಿಸಬೇಕಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com