ಉತ್ತರ ಪ್ರದೇಶ: ಅಪಘಾತದಿಂದ ರಕ್ಷಿಸಲು ಹಸುಗಳಿಗೆ ರೇಡಿಯಂ ಬ್ಯಾಂಡ್

ರಸ್ತೆಯಲ್ಲಿ ಸಂಚರಿಸುವಾಗ ಹಸುಗಳು ಅಪಘಾತಕ್ಕೀಡಾಗುವುದನ್ನು ತಪ್ಪಿಸುವುದಕ್ಕೆ ಉತ್ತರ ಪ್ರದೇಶ ಪೊಲೀಸರು ವಿನೂತನ ಕ್ರಮ ಕೈಗೊಂಡಿದ್ದಾರೆ.
ಉತ್ತರ ಪ್ರದೇಶ: ಅಪಘಾತದಿಂದ ರಕ್ಷಿಸಲು ಹಸುಗಳಿಗೆ ರೇಡಿಯಂ ಬ್ಯಾಂಡ್
ಉತ್ತರ ಪ್ರದೇಶ: ಅಪಘಾತದಿಂದ ರಕ್ಷಿಸಲು ಹಸುಗಳಿಗೆ ರೇಡಿಯಂ ಬ್ಯಾಂಡ್
Updated on
ಲಖನೌ: ರಸ್ತೆಯಲ್ಲಿ ಸಂಚರಿಸುವಾಗ ಹಸುಗಳು ಅಪಘಾತಕ್ಕೀಡಾಗುವುದನ್ನು ತಪ್ಪಿಸುವುದಕ್ಕೆ ಉತ್ತರ ಪ್ರದೇಶ ಪೊಲೀಸರು ವಿನೂತನ ಕ್ರಮ ಕೈಗೊಂಡಿದ್ದಾರೆ. 
ಬೀದಿ ಹಸುಗಳ ಕೊಂಬು ಹಾಗೂ ಕುತ್ತಿಗೆ ಸುತ್ತ ರೇಡಿಯಂ ಬ್ಯಾಂಡ್ ಹಾಕಲಾಗುತ್ತಿದೆ.  ಇದರಿಂದಾಗಿ ವಾಹನಗಳಿಗೆ ಹಸುಗಳಿರುವುದು ದೂರದಲ್ಲಿಯೇ ತಿಳಿಯುತ್ತದೆ. ಚಳಿಗಾಲದಲ್ಲಿ ಮಂಜು ಮುಸುಕಿದ ವಾತಾವರಣವಿದ್ದಾಗ ಈ ರೇಡಿಯಂ ಬ್ಯಾಂಡ್ ಗಳು ಉಪಯೋಗವಾಗಲಿದ್ದು, ದೂರದಿಂದಲೇ ಪ್ರಾಣಿಗಳಿರುವುದನ್ನು ಸುಲಭವಾಗಿ ತಿಳಿದು ಅಪಘಾತವನ್ನು ನಿಯಂತ್ರಿಸಬಹುದಾಗಿದೆ. 
ಮಂಜುಮುಸುಕಿದ ವಾತಾವರಣವಿದ್ದಾಗ ಹಸುಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಕ್ಕೀಡಾಗಿದ್ದವು ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರೇಡಿಯಂ ಬ್ಯಾಂಡ್ ಕಟ್ಟುವ ನಿರ್ಧಾರ ಕೈಗೊಂಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com