ಗುಜರಾತ್ ನಲ್ಲಿ ಮೋದಿ, ವಾಜಪೇಯಿ ಚಿನ್ನದ ನಾಣ್ಯಕ್ಕೆ ಭರ್ಜರಿ ಬೇಡಿಕೆ

ಗುಜರಾತ್ ನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ....
ನರೇಂದ್ರ ಮೋದಿ
ನರೇಂದ್ರ ಮೋದಿ
Updated on
ಸೂರತ್: ಗುಜರಾತ್ ನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಚಿತ್ರ ಹೊಂದಿರುವ ಚಿನ್ನ ಹಾಗೂ ಬೆಳ್ಳಿಯ ಗಟ್ಟಿಗಳು ಖರೀದಿದಾರರ ಗಮನ ಸೆಳೆಯುತ್ತಿವೆ. 
ಆಭರಣ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯಲು ಈ ವರ್ಷ ಚಿನ್ನದ ಗಟ್ಟಿ ಹಾಗೂ ನಾಣ್ಯಗಳ ಮೇಲೆ ಲಕ್ಷ್ಮೀ ಹಾಗೂ ಗಣೇಶನ ಬದಲು ನರೇಂದ್ರ ಮೋದಿ, ವಾಜಪೇಯಿ ಅವರ ಚಿತ್ರ ಮೂಡಿದೆ.
ನಮಗೆ ಮೋದಿ ಹಾಗೂ ವಾಜಪೇಯಿ ಕೂಡ ದೇವರಿದ್ದಂತೆ. ಹೀಗಾಗಿ ಇವರ ಭಾವಚಿತ್ರವಿರುವ ಬಂಗಾರದ್ದ ಗಟ್ಟಿಯನ್ನು ಈ ವರ್ಷ ಖರೀದಿಸಿ, ಪೂಜಿಸುವ ಮೂಲಕ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ಗ್ರಾಹಕರೊಬ್ಬರು ಹೇಳಿಕೊಂಡಿದ್ದಾರೆ. 
ಪ್ರಧಾನಿ ಭಾವಚಿತ್ರವಿರುವ ಚಿನ್ನ ಮಾರಾಟ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್ ಸಿಎಂ ವಿಜಯ್ ರೂಪಾನಿ ಅವರ ಭಾವಚಿತ್ರವನ್ನೊಳಗೊಂಡ ಬಂಗಾರದ ರಾಖಿಯನ್ನು ಮಾರಾಟ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com