ಶಬರಿಮಲೆಯಲ್ಲಿ ಇಂದು ವಿಶೇಷ ಪೂಜೆ: ಮಹಿಳೆಯರಿಗೆ ಸಿಗಲಿದೆಯೇ ದರ್ಶನ ಭಾಗ್ಯ?

ಸ್ವಾಮಿ ಅಯ್ಯಪ್ಪನ ವಿಶೇಷ ಪೂಜೆಗಾಗಿ ಸೋಮವಾರ ದೇಗುಲದ ಬಾಗಿಲು ಭಕ್ತರಿಗೆ ತೆರೆಯಲಿದ್ದು, ಮಹಿಳೆಯರು ಸಹ ಪ್ರವೇಶಿಸಲಿರುವುದರಿಂದ ಮತ್ತೊಮ್ಮೆ ಸಂಘರ್ಷ...
ಶಬರಿಮಲೆ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಶಬರಿಮಲೆ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಶಬರಿಮಲೆ: ಸ್ವಾಮಿ ಅಯ್ಯಪ್ಪನ ವಿಶೇಷ ಪೂಜೆಗಾಗಿ ಸೋಮವಾರ ದೇಗುಲದ ಬಾಗಿಲು ಭಕ್ತರಿಗೆ ತೆರೆಯಲಿದ್ದು, ಮಹಿಳೆಯರು ಸಹ ಪ್ರವೇಶಿಸಲಿರುವುದರಿಂದ ಮತ್ತೊಮ್ಮೆ ಸಂಘರ್ಷ, ಹಿಂಸಾಚಾರ ಏರ್ಪಡುವ ಸಾಧ್ಯತೆಯಿದೆ.

ಈ ನಿಟ್ಟಿನಲ್ಲಿ ಶಬರಿಮಲೆ ಸುತ್ತಮುತ್ತ  ಭಾರೀ ಪೊಲೀಸ್‌ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆಯೂ ಜಾರಿ ಮಾಡಲಾಗಿದೆ. ಸುಮಾರು 2,300 ಪೊಲೀಸ್ ಸಿಬ್ಬಂದಿಗಳು, 20 ಕಮಾಂಡೊ ಸದಸ್ಯರು ಮತ್ತು 100 ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಅಗತ್ಯಬಿದ್ದರೆ ಶಬರಿಮಲೆ ಸನ್ನಿಧಾನದಲ್ಲಿ ಇನ್ನೂ ಹೆಚ್ಚಿನ ಮಹಿಳಾ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ ನ್ನು ನೇಮಕ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲ ವಯೋಮಾನದ ಮಹಿಳೆಯರ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳು ಐದು ದಿನಗಳ ತುಲಾ ಮಾಸ ಪೂಜೆ ವೇಳೆ ಪರ-ವಿರೋಧದ ಮೊದಲ ಸಂಘರ್ಷ ಏರ್ಪಟ್ಟಿತ್ತು.

ನಿಷೇಧಿತ ವಯಸ್ಸಿನ ಕೆಲವು ಮಹಿಳೆಯರು ಇಂದು ಪೂಜೆಗೆ ದೇಗುಲ ಪ್ರವೇಶಿಸಲು ಸಜ್ಜಾಗಿದ್ದು, ಯಥಾಪ್ರಕಾರ ಅವರನ್ನು ತಡೆಯುವ ಪಣ ತೊಟ್ಟಿರುವ ಅಯ್ಯಪ್ಪನ ಭಕ್ತರ ಪಡೆಗಳೂ ಅಲ್ಲಲ್ಲಿ ಬೀಡುಬಿಟ್ಟಿವೆ. ಇದರಿಂದ ನಿನ್ನೆಯಿಂದಲೇ ಶಬರಿಮಲೆ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com