ಮಹಿಳೆಯರನ್ನು ನೋಡಲು ಇಚ್ಛಿಸದ ಅಯ್ಯಪ್ಪ ದೇವರೇ ಅಲ್ಲ: ಪ್ರಕಾಶ್ ರೈ

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಪ್ರಕಾಶ್ ರೈ ಟ್ರೆಂಡಿಂಗ್ ನಲ್ಲಿರುವ ಎಲ್ಲಾ ವಿಷಯಗಳ ಬಗ್ಗೆಯೂ ಒಂದಲ್ಲಾ ಒಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಈಗ ಅವರ ಹೇಳಿಕೆ ಬಂದಿರುವುದು ಶಬರಿಮಲೆ
ಪ್ರಕಾಶ್ ರೈ
ಪ್ರಕಾಶ್ ರೈ
ಬೆಂಗಳೂರು: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಪ್ರಕಾಶ್ ರೈ ಟ್ರೆಂಡಿಂಗ್ ನಲ್ಲಿರುವ ಎಲ್ಲಾ ವಿಷಯಗಳ ಬಗ್ಗೆಯೂ ಒಂದಲ್ಲಾ ಒಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಈಗ ಅವರ ಹೇಳಿಕೆ ಬಂದಿರುವುದು ಶಬರಿಮಲೆ ಅಯ್ಯಪ್ಪನ ಕುರಿತು. 
ಗಲ್ಫ್ ಇಂಟರ್ ನ್ಯಾಷನಲ್ ಬುಕ್ ಫೇರ್ ನಲ್ಲಿ ಮಾತನಾಡಿರುವ ಪ್ರಕಾಶ್ ರೈ, ಶಬರಿಮಲೆಯಲ್ಲಿ ಮಹಿಳೆಯರಿಗೆ ವಯಸ್ಸಿನ ಮಿತಿ ನೋಡದೇ ಪ್ರವೇಶ ನೀಡಬೇಕೆಂಬ ನಿಲುವು ಪ್ರಕಟಿಸಿದ್ದು, ಮಹಿಳೆಯೆಂದರೆ ತಾಯಿ. ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಮಹಿಳೆಯಿಂದಲೇ ನಮಗೆ ಜನ್ಮ ಸಿಗುತ್ತದೆ. ಅದೇ ಮಹಿಳೆಯನ್ನು ಪೂಜೆಯಿಂದ ದೂರವಿಟ್ಟರೆ ಅದಕ್ಕೆ ಅರ್ಥವೇನು? ಮಹಿಳೆಯರು ಯುವತಿಯರಿಗೆ ಪೂಜೆಯಿಂದ ನಿರ್ಬಂಧ ವಿಧಿಸುವ ಧರ್ಮ ಧರ್ಮವೇ ಅಲ್ಲ ಎಂದು ಹೇಳಿದ್ದಾರೆ. 
ಮಹಿಳೆಯರನ್ನು ದೇವಾಲಯ ಪ್ರವೇಶದಿಂದ ದೂರವಿರಿಸುವ ಭಕ್ತರು ಭಕ್ತರೇ ಅಲ್ಲ. ಮಹಿಳೆಯರನ್ನು ನೋಡಲೂ ಇಚ್ಛಿಸದ ಅಯ್ಯಪ್ಪ ದೇವರೇ ಅಲ್ಲ. ಮಹಿಳೆಯರನ್ನು ದೇವರ ದರ್ಶನ ಪಡೆಯುವುದರಿಂದ ನಿರ್ಬಂಧಿಸುವುದಕ್ಕೆ ಯಾರಿಗೂ ಹಕ್ಕು ಇಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com