ಅಮಿತ್ ಶಾ-ವಸುಂಧರಾ ರಾಜೆ ನಡುವೆ ಕೊನೆಗಾಣದ ಭಿನ್ನಾಭಿಪ್ರಾಯ: ಮೋದಿ ಮಧ್ಯಪ್ರವೇಶ?

ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಇನ್ನೊಂದು ತಿಂಗಳಷ್ಟೇ ಬಾಕಿ ಉಳಿದಿದ್ದು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ವಸುಂಧರಾ ರಾಜೆ ನಡುವೆ ಒಮ್ಮತ ಮೂಡದೇ ಪರಿಸ್ಥಿತಿ ಕಗ್ಗಂಟಾಗಿದೆ.
ಅಮಿತ್ ಶಾ-ವಸುಂಧರಾ ರಾಜೆ ನಡುವೆ ಕೊನೆಗಾಣದ ಭಿನ್ನಾಭಿಪ್ರಾಯ: ಮೋದಿ ಮಧ್ಯಪ್ರವೇಶ?
ಅಮಿತ್ ಶಾ-ವಸುಂಧರಾ ರಾಜೆ ನಡುವೆ ಕೊನೆಗಾಣದ ಭಿನ್ನಾಭಿಪ್ರಾಯ: ಮೋದಿ ಮಧ್ಯಪ್ರವೇಶ?
ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಇನ್ನೊಂದು ತಿಂಗಳಷ್ಟೇ ಬಾಕಿ ಉಳಿದಿದ್ದು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ವಸುಂಧರಾ ರಾಜೆ ನಡುವೆ ಒಮ್ಮತ ಮೂಡದೇ ಪರಿಸ್ಥಿತಿ ಕಗ್ಗಂಟಾಗಿದೆ. 
ಕಳೆದ ತಿಂಗಳು ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಸ್ತಾಪಿಸಿ ವಸುಂಧರಾ ರಾಜೆ ನೀಡಿದ್ದ ಪಟ್ಟಿಯನ್ನು 2 ಬಾರಿ ಅಮಿತ್  ಶಾ ತಿರಸ್ಕರಿಸಿದ್ದರು. ಈಗ ಚುನಾವಣೆಗೆ ತಿಂಗಳಷ್ಟೇ ಬಾಕಿ ಇದ್ದು, ಭಿನ್ನಾಭಿಪ್ರಾಯ ಕೊನೆಗಾಣದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೆಶ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. 
ವಸುಂಧರಾ ರಾಜೆ ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಅಮಿತ್ ಶಾ ಕಾರ್ಯಕರ್ತರ ಪ್ರತಿಕ್ರಿಯೆಗೆ ಅನುಗುಣವಾಗಿ ಕೇಂದ್ರ ನಾಯಕರ ಒಮ್ಮತದದೊಂದಿಗೆ ಅಭ್ಯರ್ಥಿಗಳ ಪಟ್ಟಿ ತಯಾರಾಗಬೇಕೆನ್ನುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಹಾಲಿ ಶಾಸಕರು ಬಂಡಾಯ ಏಳುವ ಸಾಧ್ಯತೆ ಇದೆ ಎಂದು ವಸುಂಧರಾ ರಾಜೆ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಹಾಗೂ ವಸುಂಧರಾ ರಾಜೆ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಚುನಾವಣೆ ಸಂದರ್ಭದಲ್ಲಿ ಈ ಭಿನ್ನಾಭಿಪ್ರಾಯ ಪಕ್ಷದ ಗೆಲುವಿಗೆ ಮುಳುವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ನವೆಂಬರ್ 9-10 ರಂದು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೆಶಿಸಿ ಅಮಿತ್ ಶಾ-ವಸುಂಧರಾ ರಾಜೆ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಕೊನೆಗೊಳಿಸಲಿದ್ದಾರೆ ಎಂಬ ನಿರೀಕ್ಷೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com