ಸಿವಿಸಿಗೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಪ್ರತಿಕ್ರಿಯೆ: ಲಂಚ ಆರೋಪ ನಿರಾಕರಣೆ

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಕೇಂದ್ರ ಜಾಗೃತ ಆಯೋಗಕ್ಕೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ವಿರುದ್ಧ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಮಾಡಿರುವ 2 ಕೋಟಿ ರೂ. ಲಂಚ ಆರೋಪವನ್ನು ನಿರಾಕರಿಸಿದ್ದಾರೆ.
ಅಲೋಕ್ ವರ್ಮಾ
ಅಲೋಕ್ ವರ್ಮಾ

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಕೇಂದ್ರ ಜಾಗೃತ ಆಯೋಗಕ್ಕೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ವಿರುದ್ಧ  ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಮಾಡಿರುವ  2 ಕೋಟಿ ರೂ. ಲಂಚ ಆರೋಪವನ್ನು ನಿರಾಕರಿಸಿದ್ದಾರೆ.

ಮಾಂಸ ರಪ್ತುದಾರ ಮೊಯೀಸ್ ಖುರೇಷಿ ವಿರುದ್ಧ ಸಿಬಿಐ ವಿಚಾರಣೆ ನಡೆಸದಂತೆ ನೋಡಿಕೊಳ್ಳಲು ಅಲೋಕ್ ವರ್ಮಾ  ಹೈದರಾಬಾದ್ ಮೂಲದ  ಉದ್ಯಮಿ ಸನಾ ಸತೀಶ್ ಬಾಬು ಅವರಿಂದ  2 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು  ಅಸ್ತಾನ ಆರೋಪ ಮಾಡಿದ್ದರು.

ಬಾಬು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರರಾಗಿದ್ದು, ಅಸ್ತಾನ ಮಾಡಿರುವಂತೆ ತಾವೂ ಆರೋಪಿಯಲ್ಲ ಎಂದು ವರ್ಮಾ ಕೇಂದ್ರ ಜಾಗೃತ ಆಯೋಗಕ್ಕೆ ಹೇಳಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ವರ್ಮಾ ಹಾಗೂ ಅಸ್ತಾನ ನಡುವಿನ ತಿಕ್ಕಾಟದಲ್ಲಿ  ಬಾಬು ಪ್ರಮುಖ ಪಾತ್ರದಾರಿಯಾಗಿದ್ದಾರೆ. ಪರಿಣಾಮ ಸರ್ಕಾರ ತನಿಖಾ ದಳದ ಈ ಇಬ್ಬರು ಅಧಿಕಾರಿಗಳನ್ನು  ರಜೆ ಮೇಲೆ ಕಳುಹಿಸಿದ್ದು, ಜವಾಬ್ದಾರಿಯಿಂದ ಮುಕ್ತಿಗೊಳಿಸಿದೆ.

ಖುರೇಷಿ ವಿರುದ್ಧ ಸಿಬಿಐ ಕ್ರಮ ಕೈಗೊಳ್ಳದಂತೆ ರಕ್ಷಿಸಲು ಸಾನು ಸತೀಶ್ ಬಾಬು  ಅಲೋಕ್ ವರ್ಮಾ ಅವರಿಗೆ 2 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಆಗಸ್ಟ್ 24 ರಂದು ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾ ಅವರಿಗೆ  ಅಸ್ತಾನ  ಪತ್ರ ಬರೆದಿದ್ದರು. ಇದನ್ನು ಆಗಸ್ಟ್ 30 ರಂದು ಸಂಪುಟ ಕಾರ್ಯದರ್ಶಿಗಳು ಪರಿಶೀಲನೆಗಾಗಿ ಸಿವಿಸಿಗೆ ರವಾನಿಸಿದ್ದರು.

ಇದರ ಆಧಾರದ ಮೇಲೆ ಸಿಬಿಐ ಸ್ಪಷ್ಟೀಕರಣ ನೀಡುವಂತೆ ಸಿವಿಸಿ ಸೆಪ್ಟೆಂಬರ್ 11 ರಂದು ನೋಟಿಸ್ ಹೊರಡಿಸಿತ್ತು. ವರ್ಮಾ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಳಿದ ಕೇಂದ್ರ ಜಾಗೃತ ಆಯೋಗ  ಅಕ್ಟೋಬರ್ 23 ರಂದು ಅವರನ್ನು ಜವಾಬ್ದಾರಿಯಿಂದ ಮುಕ್ತಿಗೊಳಿಸಿ ಆದೇಶ ಹೊರಡಿಸಿತ್ತು. ಅದೇ ರೀತಿಯಲ್ಲಿ ಅಸ್ತಾನ ಅವರನ್ನು  ವಿಶೇಷ ನಿರ್ದೇಶಕ ಸ್ಥಾನದಿಂದ ತಾತ್ಕಾಲಿಕವಾಗಿ ವಜಾಗೊಳಿಸಲಾಗಿತ್ತು.

ಸಿಬಿಐ ಜಂಟಿ ನಿರ್ದೇಶಕ ಎಂ. ನಾಗೇಶ್ವರ್ ರಾವ್ ಅವರನ್ನು ಅಂದೇ ಸಿಬಿಐ ಹಂಗಾಮಿ ನಿರ್ದೇಶಕರನ್ನಾಗಿ ಸರ್ಕಾರ ನೇಮಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com