3 ವರ್ಷದ ಮಗುವಿನ ಬಾಯಿಗೆ ಪಟಾಕಿ ಇಟ್ಟು ಕಿಡಿ ಹೊತ್ತಿಸಿದ ಕಿರಾತಕ: ಸಂತ್ರಸ್ತೆಯ ಸ್ಥಿತಿ ಗಂಭೀರ

ಯುವಕನೋರ್ವ ಮೂರು ವರ್ಷದ ಮಗುವಿನ ಬಾಯಿಗೆ ಪಟಾಕಿ ಇಟ್ಟು ಕಿಡಿ ಹೊತ್ತಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪಟಾಕಿ (ಸಂಗ್ರಹ ಚಿತ್ರ)
ಪಟಾಕಿ (ಸಂಗ್ರಹ ಚಿತ್ರ)
Updated on
ಲಖನೌ: ಯುವಕನೋರ್ವ ಮೂರು ವರ್ಷದ ಮಗುವಿನ ಬಾಯಿಗೆ ಪಟಾಕಿ ಇಟ್ಟು ಕಿಡಿ ಹೊತ್ತಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 
ಪಟಾಕಿ ಸಿಡಿದು ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ. ದೌರಲಾ ರೋಡ್ ನಲಿರುವ ಮಲಿಕ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದುಷ್ಕೃತ್ಯ ಎಸಗಿರುವ ಯುವಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನಿಗಾಗಿ ಶೋಧಕಾರ್ಯ ನಡೆದಿದೆ. 
ಈ ಕೃತ್ಯ ಎಸಗಿರುವ ಯುವಕ ಹರ್ಪಾಲ್ ಎಂದು ತಿಳಿದುಬಂದಿದ್ದು, ಮನೆಯ ಮುಂಭಾಗದಲ್ಲಿ ಆಡುತ್ತಿದ್ದ ಮಗಳ ಬಾಯಿಗೆ ಪಟಾಕಿ ಇಟ್ಟು ಕಿಡಿ ಹೊತ್ತಿಸಿದ್ದಾನೆ ಎಂದು ಬಾಲಕಿಯ ತಂದೆ ಶಶಿಕುಮಾರ್ ಆರೋಪಿಸಿದ್ದಾರೆ.  ಸಂತ್ರಸ್ತ ಬಾಲಕಿಯ ಬಾಯಿಗೆ 50 ಹೊಲಿಗೆ ಹಾಕಲಾಗಿದ್ದು, ಗಂಟಲಿಗೆ ಸೋಂಕು ತಗುಲಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com