ಸಿಬಿಐ ಆಂತರಿಕ ಕಚ್ಚಾಟವನ್ನು ಶಾಂತಗೊಳಿಸಲು ಆರ್ಟ್ ಆಫ್ ಲಿವಿಂಗ್ ಮೊರೆ ಹೋದ ತನಿಖಾ ಸಂಸ್ಥೆ!

ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆ ಸಿಬಿಐ ನಲ್ಲಿನ ಆಂತರಿಕ ಕಲಹಗಳಿಂದ ಇತ್ತೀಚೆಗೆ ದೇಶಾದ್ಯಂತ ತೀವ್ರ ಸುದ್ದಿ ಮಾಡಿತ್ತು. ಈಗ ಸಂಸ್ಥೆಯ ಅಧಿಕಾರಿ ವರ್ಗದವರಲ್ಲಿ "ಸಕಾರಾತ್ಮಕ ಮನೋಭಾವನೆ
ಶ್ರೀ ಶ್ರೀ ರವಿ ಶಂಕರ್
ಶ್ರೀ ಶ್ರೀ ರವಿ ಶಂಕರ್
ನವದೆಹಲಿ: ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆ ಸಿಬಿಐ ನಲ್ಲಿನ ಆಂತರಿಕ ಕಲಹಗಳಿಂದ ಇತ್ತೀಚೆಗೆ ದೇಶಾದ್ಯಂತ ತೀವ್ರ ಸುದ್ದಿ ಮಾಡಿತ್ತು. ಈಗ ಸಂಸ್ಥೆಯ ಅಧಿಕಾರಿ ವರ್ಗದವರಲ್ಲಿ "ಸಕಾರಾತ್ಮಕ ಮನೋಭಾವನೆ" ಹೆಚ್ಚಳ ಮಾಡುವುದಕ್ಕಾಗಿ ಮೂರು ದಿನಗಳ ಕಾಲ ಜೀವನ ಕಲೆ (ಆರ್ಟ್ ಆಫ್ ಲಿವಿಂಗ್) ಕಾರ್ಯಾಗಾರ ನಡೆಸಲು ಸಂಸ್ಥೆ ಮುಖ್ಯಸ್ಥರು ತೀರ್ಮಾನಿಸಿದ್ದಾರೆ.
ನಾಳೆ (ನವೆಂಬರ್ 10) ಯಿಂದ ಮೂರು ದಿನಗಳ ಕಾಲ ನವದೆಹಲಿಯಲ್ಲಿ ನಡೆಯಲಿರುವ ಶ್ರೀ ಶ್ರೀ ರವಿಶಂಕರ್ ನೇತೃತ್ವದ ಕಾರ್ಯಾಗಾರದಲ್ಲಿ 150 ಕ್ಕಿಂತ ಹೆಚ್ಚು ಸಿಬಿಐ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಸಿಬಿಐ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಇನ್ಸ್ ಪೆಕ್ಟರ್ ಶ್ರೇಣಿಯ ಅಧಿಕಾರಿಗಳು, ಇನ್ ಚಾರ್ಜ್ ನಿರ್ದೇಶಕರುಗಳು ಶಿಬಿರದಲ್ಲಿ ಬಾಗವಿಸಲಿದ್ದಾರೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಮೇಲೆ ಸಿಬಿಐ  ವಿಶೇಷ ನಿರ್ದೇಶಕ ರಾಕೇಶ್ ಅಸ್ತನಾ ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧ ಸಿವಿಸಿ ಎದುರು ವಿಚಾರಣೆಗೆ ಹಾಜರಾಗಿದ್ದರು.ಈ ನಡುವೆ ಸಂಸ್ಥೆಯು ಅಸ್ತಾನಾ ಹಾಗೂ ಅಲೋಕ್ ವರ್ಮಾ ಅವರನ್ನು ಸುದೀರ್ಘ ರಜೆ  ಮೇಲೆ ಕಳಿಸಿರುವುದು ತೀವ್ರ ವಿವಾದಕ್ಕೆ ಎಡೆಮಾಡಿದೆ. ಅಲ್ಲದೆ ಪ್ರಧಾನಿ ನೇತೃತ್ವದ ಸಮಿತಿಯು ಎಂ.ನಾಗೇಶ್ವರ ರಾವ್ ಅವರನ್ನು ತನಿಖಾ ಸಂಸ್ಥೆಯ ಮದ್ಯಂತರ ಮುಖ್ಯಸ್ಥರಾಗಿ  ನೇಮಕ ಮಾಡಿ ಸುದ್ದಿಗೆ ಗ್ರಾಸವಾಗಿತ್ತು.
ಸಿವಿಸಿ ವಿಚಾರಣೆಗಾಗಿ  ವರ್ಮಾ ಮತ್ತು ಅಸ್ತಾನಾ ಅವರು ಸಿವಿಸಿ ಅಧಿಕಾರಿ ) ಕೆ.ವಿ.ಚೌಡರಿ ಮುಂದೆ ಹಾಜರಾಗಿದ್ದರು.
ಸಂಸ್ಥೆಯಲ್ಲಿ ನಡೆದ ಈ ಎಲ್ಲಾ ಬೆಳವಣಿಗೆಗಳಿಂದ ಅಧಿಕಾರಿಗಳ ಮನಸ್ಸಿನಲ್ಲಿ ಮೂಡಿದ ನಕಾರಾತ್ಮಕ ಮನೋಭಾವನೆ ತೊಲಗಿಸಲು ಈ ಕಾರ್ಯಾಗಾರ ನೆರವಾಗಲ್ಲಿದೆ ಎಂದು ಸಂಸ್ಥೆಯ ಅಧಿಸೂಚನೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com