ಅಮೆರಿಕದ ಎಂ777 ಹೊವಿಟ್ಜರ್ ಸೇರಿ ಮೂರು ಅತ್ಯಾಧುನಿಕ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆ!

ಅಮೆರಿಕದಿಂದ ಖರೀದಿ ಮಾಡಿರುವ ಅತ್ಯಾಧುನಿಕ 155 ಎಂ.ಎಂ/39 ಕ್ಯಾಲಿಬ್ರೆ ಸಾಮರ್ಥ್ಯ‌ದ 'ಎಂ-777 ಫಿರಂಗಿಯೂ ಸೇರಿದಂತೆ ಮೂರು ಅತ್ಯಾಧುನಿಕ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತೀಯ ಸೇನೆಯ ದಶಕಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದ್ದು, ಅಮೆರಿಕದಿಂದ ಖರೀದಿ ಮಾಡಿರುವ ಅತ್ಯಾಧುನಿಕ 155 ಎಂ.ಎಂ/39 ಕ್ಯಾಲಿಬ್ರೆ ಸಾಮರ್ಥ್ಯ‌ದ 'ಎಂ-777 ಫಿರಂಗಿಯೂ ಸೇರಿದಂತೆ ಮೂರು ಅತ್ಯಾಧುನಿಕ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತ್ಯಾಧುನಿಕ M777 ಹೊವಿಟ್ಜರ್ ಫಿರಂಗಿಗೆ ಹಸಿರು ನಿಶಾನೆ ತೋರುವ ಮೂಲಕ ಫಿರಂಗಿಯನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಿದರು. ಅತ್ತ ಸಚಿವರುಹಸಿರು ನಿಶಾನೆ ತೋರುತ್ತಿದ್ದಂತೆಯೇ ಇತ್ತ ಸೈನಿಕರು ಫಿರಂಗಿಗೆ ಚಾಲನೆ ನೀಡಿದರು. M777 ಹೊವಿಟ್ಜರ್ ಫಿರಂಗಿಗೆ 'ಕೆ-9 ವಜ್ರ ಟಿ ಎಂದು ಮರು ನಾಮಕರಣ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಎಂ777 ಹೊವಿಟ್ಜರ್ ಫಿರಂಗಿ ಹಗುರವಾಗಿದ್ದು, ಇದನ್ನು ಹೆಲಿಕಾಪ್ಟರ್ ಮೂಲಕ ಬೆಟ್ಟಗುಡ್ಡಗಳ ಮೇಲೆ ರವಾನೆ ಮಾಡಬಹುದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬೋಫೋರ್ಸ್‌ ಫಿರಂಗಿ ಹಗರಣದ ನಂತರ 30 ವರ್ಷಗಳ ಕಾಲ ಭಾರತ ಒಂದೇ ಒಂದು ಫಿರಂಗಿಯನ್ನು ಅನ್ಯದೇಶಗಳಿಂದ ಖರೀದಿಸಿರಲಿಲ್ಲ. ಇದರಿಂದಾಗಿ ಸೇನೆಯಲ್ಲಿ ಫಿರಂಗಿಗಳ ಆಭಾವ ಎದುರಾಗಿತ್ತು. ಸೇನೆಯ ಈ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಮೆರಿಕದ ಜತೆ 5000 ಕೋಟಿ ರೂ. ಮೊತ್ತದ 145 ಫಿರಂಗಿಗಳ ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಅದರ ಅನುಸಾರ ಬಿಎಇ ಸಿಸ್ಟಮ್ಸ್‌ ಕಂಪನಿಯು ಮೊದಲ ಭಾಗವಾಗಿ ಕಳುಹಿಸಿದ್ದ ಎರಡು ಫಿರಂಗಿಗಳು ಮೇನಲ್ಲಿ ಭಾರತಕ್ಕೆ ಬಂದಿದ್ದವು.  2018ರ ಸೆಪ್ಟೆಂಬರ್‌ ಹೊತ್ತಿಗೆ ಇನ್ನೂ 3 ಫಿರಂಗಿಗಳು ಭಾರತಕ್ಕೆ ಬಂದಿದ್ದು, ಇದೀಗ ಮತ್ತೆ ಮೂರು ಫಿರಂಗಿಗಳು ಸೇನೆಗೆ ಸೇರ್ಪಡೆಯಾಗಿವೆ.
ಫಿರಂಗಿಗಳನ್ನು ಹಲವು ಪರೀಕ್ಷಾರ್ಥ ಪ್ರಯೋಗಗಳಿಗೆ ಒಳಪಡಿಸಿ 2019ರ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಸೇನಾ ಬತ್ತಳಿಕೆ ಸೇರಿಸಿಕೊಳ್ಳುವುದಾಗಿ ಸೇನಾ ಮೂಲಗಳು ತಿಳಿಸಿವೆ. ಅಂತೆಯೇ 2021ರ ಹೊತ್ತಿಗೆ ಎಲ್ಲ 145 ಫಿರಂಗಿಗಳು ಭಾರತೀಯ ಸೇನೆ ಬತ್ತಳಿಕೆ ಸೇರಲಿವೆ. 25 ಫಿರಂಗಿಗಳನ್ನು ಅಮೆರಿಕ ಕಂಪನಿ ಪೂರೈಸಲಿದ್ದು, ಉಳಿದ 120ಅನ್ನು ಮಹೀಂದ್ರಾ ಕಂಪನಿ ಸಹಯೋಗದಲ್ಲಿ ಭಾರತದಲ್ಲಿಯೇ ತಯಾರಿಸಲು ಬಿಎಇ ಸಿಸ್ಟಮ್ಸ್‌ ತಂತ್ರಜ್ಞಾನ ವಿನಿಮಯ ಮಾಡಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com