ಮಧ್ಯಪ್ರದೇಶ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ
ದೇಶ
ಮತಕ್ಕಾಗಿ ಭಕ್ಷಕರು ಗೋವುಗಳ ಆರಾಧಕರಂತೆ ನಟಿಸುತ್ತಿದ್ದಾರೆ: ಬಿಜೆಪಿ ಶಾಸಕ
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತಕ್ಕಾಗಿ ಭಕ್ಷಕರು ಗೋವುಗಳ ಆರಾಧಕರಂತೆ ನಟಿಸುತ್ತಿದ್ದಾರೆಂದು ಮಧ್ಯಪ್ರದೇಶ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಅವರು ಭಾನುವಾರ ಹೇಳಿದ್ದಾರೆ...
ಭೋಪಾಲ್: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತಕ್ಕಾಗಿ ಭಕ್ಷಕರು ಗೋವುಗಳ ಆರಾಧಕರಂತೆ ನಟಿಸುತ್ತಿದ್ದಾರೆಂದು ಮಧ್ಯಪ್ರದೇಶ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಅವರು ಭಾನುವಾರ ಹೇಳಿದ್ದಾರೆ.
ಮಧ್ಯಪ್ರದೇಶ ವಿಧಾನಸಬಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ರಾಮ್ ವನ್ ಗಮನ್ ಮಾರ್ಗ ಪ್ರವಾಸವನ್ನು ಆರಂಭಿಸುವುದಾಗಿ, ಗೋವುಗಳ ರಕ್ಷೆ ಮಾಡುವುದಾಗಿ, ಗೋಶಾಲೆಗಳಲ್ಲಿ ಗೋಮೂತ್ರ ಹಾಗೂ ಹಸುವಿನ ಬೆರಣಿಯನ್ನು ಮಾರಾಟ ಮಾಡುವುದಾಗಿ ತಿಳಿಸಿದೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಮೇಶ್ವರ್ ಶರ್ಮಾ ಅವರು, ಕೇರಳದಲ್ಲಿ ತನ್ನ ಪಕ್ಷದ ಕಾರ್ಯಕರ್ತರು ಕೋವುಗಳನ್ನು ಹತ್ಯೆ ಮಾಡಿದ್ದರು. ಇದೀಗ ಅದೇ ಪಕ್ಷದ ಭಕ್ಷಕರು ಗೋವುಗಳ ಅರಾಧನೆ ಮಾಡುವುದಾಗಿ ಹೇಳುತ್ತಿದ್ದಾರೆ. ಕೇವಲ ಮತಕ್ಕಾಗಿ ಭಕ್ಷಕರು ಗೋವುಗಳನ್ನು ರಕ್ಷಣೆ ಮಾಡುವುದಾಗಿ ನಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ