ಕಳೆದ 1 ವರ್ಷದಲ್ಲಿ ಮೋದಿ ಸರ್ಕಾರದಿಂದ 25 ಪಟ್ಟಣ, ಹಳ್ಳಿಗಳ ಹೆಸರು ಬದಲಾವಣೆ

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕಳೆದ ಒಂದು ವರ್ಷದಲ್ಲಿ ದೇಶದ 25 ಪಟ್ಟಣ ಮತ್ತು ಹಳ್ಳಿಗಳ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕಳೆದ ಒಂದು ವರ್ಷದಲ್ಲಿ  ದೇಶದ 25 ಪಟ್ಟಣ ಮತ್ತು ಹಳ್ಳಿಗಳ ಹೆಸರನ್ನು ಬದಲಾಯಿಸಿದೆ.
ಅಲಹಾಬಾದ್ ಮತ್ತು ಫೈಜಾಬಾದ್ ನಂತರ ಈಗ ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಾವಣೆ ಮಾಡುವ ಯತ್ನವೂ ನಡೆದಿದ್ದು, ಆ ಪ್ರಕ್ರಿಯೆ ಬಾಕಿ ಉಳಿದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಲಹಾಬಾದ್ ನಗರವನ್ನು ಪ್ರಯಾಗ್​ರಾಜ್​ ಎಂಬುದಾಗಿ ಮತ್ತು ಫೈಜಾಬಾದ್ ನಗರವನ್ನು ಆಯೋಧ್ಯಾ ಎಂದು ಬದಲಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ. ಆದರೆ ಅಲಹಾಬಾದ್ ಹಾಗೂ ಫೈಜಾಬಾದ್ ಮರು ನಾಮಕರಣದ ಪ್ರಸ್ತಾವನೆ ಇನ್ನೂ ಕೇಂದ್ರಕ್ಕೆ ತಲುಪಿಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಹೆಸರು ಬದಲಾವಣೆಗೊಂಡ ನಗರಗಳ ಪಟ್ಟಿ ಹೀಗಿದೆ. ಆಂಧ್ರಪ್ರದೇಶದ  ಪೂರ್ವ ಗೋದಾವರಿ ಜಿಲ್ಲೆಯ ರಾಜಮುಂಡ್ರಿ ನಗರ ರಾಜಮಹೇಂದ್ರವರ್ಮಾ ನಗರವಾಗಿ ಹೆಸರು ಬದಲಾವಣೆಗೊಂಡಿದೆ.  ಓಡಿಶಾದ ಭಾದ್ರಾಕ್​ ಜಿಲ್ಲೆಯ ಔಟರ್​ ವೀಲ್ಹರ್​ ನಗರ ಎಪಿಜಿ ಅಬ್ದುಲ್ ಕಲಾಂ ದ್ವೀಪ ಎಂದು ಬದಲಾವಣೆ ಮಾಡಲಾಗಿದೆ.
ಇನ್ನು ಕೇರಳದ ಮಾಲಪ್ಪುರ ಜಿಲ್ಲೆಯ ಅರಿಕ್ಕೋಡ್ ನಗರವು ಅರಿಕೋಡೆ ಎಂಬುದಾಗಿ ಹಾಗೂ ಹರ್ಯಾಣ ರಾಜ್ಯದ ಜಿಂದ್​ ಜಿಲ್ಲೆಯ ಪಿಂಡಾರಿ ನಗರವೂ ಪಾಂಡು-ಪಿಂಡಾರ ಎಂಬುದಾಗಿ ಮತ್ತು ನಾಗಾಲ್ಯಾಂಡ್​ನ ಕಿಪೈರೆ ಜಿಲ್ಲೆಯ ಸಾಂಪುರ್​ ನಗರವನ್ನು ಸಾಮ್​ಪುರಿ ಎಂದು ಹೆಸರು ಬದಲು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com