ಚೆನ್ನೈ: ಮನೆಯೊಳಗೆ ಬರಲು ಅವಕಾಶ ನೀಡದ ತಂದೆಯನ್ನು ಮಗನೊಬ್ಬ ಜೀವಂತವಾಗಿ ಸುಟ್ಟಿರುವ ಘಟನೆ ತಮಿಳು ನಾಡಿನಲ್ಲಿ ನಡೆದಿದೆ.
ತಮಿಳು ನಾಡಿನ ರೋಯಪೆಟ್ಟಾದಲ್ಲಿ ನಡೆದ ಈ ಪ್ರಕರಣ್ದಲ್ಲಿ ಮಗ ತಂದೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ರೋಯಪೆಟ್ಟಾದಲ್ಲಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಾಸವಿದ್ದ ಇ.ಶಂಕರ್ (56) ಬೆಂಕಿಯಿಂದ ಸುಟ್ಟು ಸಾವನ್ನಪ್ಪಿದ್ದಾನೆ.
ಘಟನೆ ವಿವರ
ಶಂಕರ್ ಅವರಿಗೆ ಮೂವರು ಮಕ್ಕಳಿದ್ದು ಇದರಲ್ಲಿ ಒಬ್ಬ ಮಗನಿಗೆ ಮನೆಯಲ್ಲಿ ಮಲಗಲು ಅವಕಾಶ ನೀಡದ್ದಕ್ಕಾಗಿ ಮಕ್ಕಳು ತಂದೆಯ ನಡುವೆ ಜಗಳ ಪ್ರಾರಂಭವಾಗಿತ್ತು.ಶುಕ್ರವಾರ ಶಂಕರ್ ತಮ್ಮ ಮಗ ರಾಮಕೃಷ್ಣ ಜತೆ ಗಲಾಟೆ ಮಾಡಿಕೊಂಡಿದ್ದಾರೆ. ಕುಡಿತದ ಚಟವಿರುವ ನಿನಗೆ ಮನೆಯಲ್ಲಿ ಮಲಗಲು ಬಿಡುವುದಿಲ್ಲ ಎಂದು ಶಂಕರ್ ಹೇಳಿದ್ದಾರೆ.
ಮನೆಯಲ್ಲಿ ಮಾತಿನ ಚಕಮಕಿ ನಡೆದಿದ್ದು ಪಕ್ಕದ ಮನೆಯವರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಿಸಿದ್ದ ಝಾಮ್ ಬಜಾರ್ ಪೋಲೀಸರು ತಂದೆ-ಮಗನನ್ನು ಠಾಣೆಗೆ ಕರೆದೊಯ್ದು ಬುದ್ದಿ ಹೇಳಿ ಹಿಂದಕ್ಕೆ ಕಳಿಸಿದ್ದಾರೆ.
ಶುಕ್ರವಾರ ರಾತ್ರಿ ಮನೆಯ ಮೇಲಂತಸ್ಥಿನಲ್ಲಿ ಕಿರಿಯ ಮಗ, ಕೆಳಗೆ ತಂದೆ ಶಂಕರ್ ಮಲಗಿದ್ದರು. ರಾಮಕೃಷ್ಣ ಮನೆಯ ಹೊರಗೇ ಮಲಗಿದ್ದ. ಆದರೆ ನಡುರಾತ್ರಿಯ ವೇಳೆ ರಾಮಕೃಷ್ಣ ತಂದೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಸುಮಾರು ರಾತ್ರಿ 1.30ರ ವೇಳೆಗೆ ತಂದೆಯ ಅರಚಾಟ ಕೇಳಿದ ಕಿರಿಯ ಮಗ ಮೇಲಿನಿಂದ ಇಳಿದು ಬರಲು ತಂದೆ ಬೆಂಕಿಯಲ್ಲಿ ಸುಟ್ಟು ನರಳುತ್ತಿರುವುದು ಕಂಡಿದೆ. ಅದಾಗಲೇ ಶೇಕಡಾ 95ರಷ್ಟು ಸುಟ್ಟು ಕರಕಲಾಗಿದ್ದ ಶಂಕರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೂ ಚಿಕಿತ್ಸೆ ಫಲಿಸಲ್ದೆ ಸಾವನ್ನಪ್ಪಿದ್ದಾರೆ.
ಘಟನೆ ಸಂಬ<ಧ ರಾಮಕೃಷ್ಣನನ್ನು ವಶಕ್ಕೆ ಪಡೆದು ಪೋಲೀಸರು ವಿಚಾರಿಸಲಾಗಿ ತಾನು ಪೆಟ್ರೋಲ್ ಖರೀದಿಸಿ ತಂದಿದ್ದು ಆ ರಾತ್ರಿ ಕಿಟಕಿ ಮೂಲಕ ತಂದೆಯ ಮೇಲೆ ಅದನ್ನು ಸುರಿದು ಬೆಂಕಿ ಹಚ್ಚಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದರು.