ಛತ್ತೀಸ್ಗಢ ರಾಜ್ಯದ ಬಿಲಾಸ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡುತ್ತಿರುವ ಪ್ರಧಾನಿ ಮೋದಿ
ದೇಶ
ಬಿಜೆಪಿ ವಿರುದ್ಧ ಹೇಗೆ ಹೋರಾಡಬೇಕೆಂಬುದು ಈಗಲೂ ವಿಪಕ್ಷಗಳಿಗೆ ತಿಳಿದಿಲ್ಲ: ಪ್ರಧಾನಿ ಮೋದಿ
ಬಿಜೆಪಿ ವಿರುದ್ಧ ಹೇಗೆ ಹೋರಾಡಬೇಕೆಂಬುದು ವಿರೋಧ ಪಕ್ಷಗಳಿಗೆ ಈಗಲೂ ತಿಳಿಸಿಲ್ಲ. ನಾವು ಅಭಿವೃದ್ಧಿಯತ್ತ ಗಮನ ಹರಿಸಿದ್ದೇವೆ. ಜಾತಿ ಭೇದಗಳಿಗೆ ಮೀರಿ ನಾವು ಅಭಿವೃದ್ಧಿಗಾಗಿ ದುಡಿಯುತ್ತಿದ್ದೇವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ...
ಬಿಲಾಸ್ಪುರ: ಬಿಜೆಪಿ ವಿರುದ್ಧ ಹೇಗೆ ಹೋರಾಡಬೇಕೆಂಬುದು ವಿರೋಧ ಪಕ್ಷಗಳಿಗೆ ಈಗಲೂ ತಿಳಿಸಿಲ್ಲ. ನಾವು ಅಭಿವೃದ್ಧಿಯತ್ತ ಗಮನ ಹರಿಸಿದ್ದೇವೆ. ಜಾತಿ ಭೇದಗಳಿಗೆ ಮೀರಿ ನಾವು ಅಭಿವೃದ್ಧಿಗಾಗಿ ದುಡಿಯುತ್ತಿದ್ದೇವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.
ಛತ್ತೀಸ್ಗಢ ರಾಜ್ಯದ ಬಿಲಾಸ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿರುವ ಅವರು, ವಿರೋಧ ಪಕ್ಷಗಳಿಗೆ ಈಗಲೂ ಬಿಜೆಪಿ ವಿರುದ್ಧ ಹೋರಾಡುವುದು ಹೇಗೆ ಎಂಬುದು ತಿಳಿದಿಲ್ಲ. ನಾವು ಜಾತಿ ಬೇಧಗಳಿಗೆ ಮೀರಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಛತ್ತೀಸ್ಗಢದಲ್ಲಿ ಎಲ್ಲಿಯೇ ಹೋದರೂ ನೀವು ಅಭಿವೃದ್ಧಿಯನ್ನು ಕಾಣಬಹುದು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಛತ್ತೀಸ್ಗಢ ರಾಜ್ಯದ ಜನತೆಗಾಗಿ 36 ಅಂಶಗಳನ್ನೊಳಗೊಂಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆ ಬಿಡುಗಡೆ ವೇಳೆ ನಾಮ್‌ದಾರ್ ಅವರನ್ನು ಸರ್ ಎಂದು 150 ಬಾರಿ ಕರೆಯಲಾಯಿತು. ಇದರ ಅರ್ಧ ಛತ್ತೀಸ್ಗಢದ ಪ್ರಾಮುಖ್ಯತೆ ನಾಮ್‌ದಾರ್'ಗಿಂತಲೂ ಕಡಿಮೆಯೆಂಬುದು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಸ್ತಾರ್ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಜನರ ಬಳಿ ಮನವಿ ಮಾಡಿಕೊಂಡಿದ್ದೇನೆ. 2ನೇ ಹಂತದ ಚುನಾವಣೆಯಲ್ಲಿಯೂ ಜನರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುತ್ತಾರೆಂಬ ನಂಬಿಕೆಯಿದೆ. ಪೆಹ್ಲೆ ಮತದಾನ್, ಫಿರ್ ಜಲ್ಪಾನ್ (ಮೊದಲು ಮತದಾನ ನಂತರ ಜಲಸ್ನಾನ) ಮಂತ್ರವನ್ನು ಜನರು ಪಠಿಸಬೇಕೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ