ಹುಲಿ ಹತ್ಯೆಯಲ್ಲಿ ಮಾರ್ಗಸೂಚಿ ಉಲ್ಲಂಘನೆ: ಮರಣೋತ್ತರ ಪರೀಕ್ಷೆ ವರದಿ ಸಾಕ್ಷಿ

ಅವ್ನಿ ಹುಲಿ ಹತ್ಯೆಗೆ ವನ್ಯಜೀವಿ ಪ್ರೇಮಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆಯೇ, ಹುಲಿ ಹತ್ಯೆಯಲ್ಲಿ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿರುವುದಕ್ಕೆ ಮರಣೋತ್ತರ ಪರೀಕ್ಷೆಯೇ ಪ್ರಮುಖ ಸಾಕ್ಷಿಯಾಗಿದೆ ಎಂದು ಹಿರಿಯ ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
ಹತ್ಯೆಗೀಡಾದ ಹುಲಿ
ಹತ್ಯೆಗೀಡಾದ ಹುಲಿ

ಮುಂಬೈ:  ಅವ್ನಿ ಹುಲಿ ಹತ್ಯೆಗೆ ವನ್ಯಜೀವಿ ಪ್ರೇಮಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆಯೇ, ಹುಲಿ ಹತ್ಯೆಯಲ್ಲಿ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿರುವುದಕ್ಕೆ ಮರಣೋತ್ತರ ಪರೀಕ್ಷೆಯೇ ಪ್ರಮುಖ ಸಾಕ್ಷಿಯಾಗಿದೆ ಎಂದು ಹಿರಿಯ ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

ಹುಲಿ ಹಂತಕರಿಂದ  ದೂರ ಇದ್ದ ವೇಳೆಯಲ್ಲಿ  ಹಿಂದಿನ ಕಾಲಿನ ಕಡೆಯಿಂದ ಗುಂಡು ಬಂದಿರುವುದು ಇತ್ತೀಚಿನ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.

ಹುಲಿ ಹತ್ಯೆ ಮಾಡಲು ಬಳಸಿರುವ ಟ್ರಾನ್ ಕ್ವಿಲಿಸಿಂಗ್ ಬಂದೂಕಿನ ಬಗ್ಗೆಯೂ ಅರಣ್ಯಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹುಲಿಯಂತಹ ಅಮೂಲ್ಯ ಪ್ರಾಣಿಗಳನ್ನು ಸೆರೆ ಹಿಡಿಯಲು ಅಥವಾ ಹತ್ಯೆ ಮಾಡಲು ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದು ಅಪಾಯಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಯಾವತ್ಮಾಲೂ ಜಿಲ್ಲೆಯ ಪಂದಾರ್ ಕ್ವಾಡ ಪ್ರದೇಶದಲ್ಲಿ  ಕಳೆದ ಎರಡು ವರ್ಷಗಳಿಂದ ಅವ್ನಿ ಹುಲಿ ದಾಳಿಯಿಂದ 13 ಆರೋಪ ಕೇಳಿಬಂದ  ಹಿನ್ನೆಲೆಯಲ್ಲಿ ನವೆಂಬರ್ 2 ರಂದು ರಾಜ್ಯಸರ್ಕಾರದ ಹಂಗಾಮಿ ಶೂಟರ್ ಒಬ್ಬನಿಂದ ಆ ಹುಲಿಯನ್ನು ಹತ್ಯೆ ಮಾಡಲಾಗಿತ್ತು.

 10 ತಿಂಗಳ ಎರಡು ಮರಿಗಳನ್ನು ಹೊಂದಿದ್ದ ಹೆಣ್ಣು ಹುಲಿಯನ್ನು ಗುಂಡಿಟ್ಟು ಹತ್ಯೆ ಮಾಡಿದರ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜ್ಯಸರ್ಕಾರ ನಿಯಮ ಉಲ್ಲಂಘಿಸಿ ಹುಲಿಯನ್ನು ಹತ್ಯೆ ಮಾಡಿಸಿದೆ ಎಂದು ವನ್ಯಜೀವಿ ಪ್ರೇಮಿಗಳು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com