ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಮೈಕ್ ಪೆನ್ಸ್
ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಮೈಕ್ ಪೆನ್ಸ್

ಪೂರ್ವ ಏಷ್ಯಾ ಶೃಂಗಸಭೆ: ಅಮೆರಿಕ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಭೇಟಿ ಮಾಡಿದ ಪ್ರಧಾನಿ ಮೋದಿ

ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಅಮೆರಿಕ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ರನ್ನು ಭೇಟಿ ಮಾಡಿ ದ್ವೀಪಕ್ಷೀಯ ಮಾತುಕತೆ ನಡೆಸಿದ್ದಾರೆ.
Published on
ಸಿಂಗಾಪುರ: ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಅಮೆರಿಕ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ರನ್ನು ಭೇಟಿ ಮಾಡಿ ದ್ವೀಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಉಭಯ ನಾಯಕರೂ ಮಹತ್ವದ ಚರ್ಚೆ ನಡೆಸಿದ್ದು, ದ್ವೀಪಕ್ಷೀಯ ವಾಣಿಜ್ಯ ಒಪ್ಪಂದ, ರಕ್ಷಣಾ ಸಹಯೋಗ, ಇಂಡೋ-ಫೆಸಿಫಿಕ್ ವಿಚಾರ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಅಂತೆಯೇ ದಕ್ಷಿಣ ಹಿಂದೂ ಮಹಾಸಾಗರ ದಿನಕಳೆದಂತೆ ಚೀನಾ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದ್ದು, ಇಂಡೋ-ಫೆಸಿಫಿಕ್ ಪ್ರಾಂತ್ಯದ ದೇಶಗಳೊಂದಿಗೆ ತನ್ನ ವಾಣಿಜ್ಯ ವಹಿವಾಟು ವೃದ್ದಿಸಿಕೊಳ್ಳುವ ಮೂಲಕ ತನ್ನ ಕಂಬಂಧಬಾಹು ಚಾಚುತ್ತಿದೆ. ಹೀಗಾಗಿ ಚೀನಾ ಓಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಮೈಕ್‌ ಪೆನ್ಸ್‌ ಭೇಟಿ ಮಹತ್ವ ಪಡೆದುಕೊಂಡಿದೆ.
ಸಿಂಗಾಪುರದಲ್ಲಿ ಆಯೋಜನೆಯಾಗಿರುವ 13ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ವಿಚಾರ ಪ್ರಮುಖ ಅಜೆಂಡಾವಾಗಿದ್ದು, ಪರಸ್ಪರ ವಾಣಿಜ್ಯ ಸಹಕಾರ ಪ್ರಮುಖ ಉದ್ದೇಶವಾಗಿದೆ.
ಈ ವರ್ಷದ ಗಣತಂತ್ರೋತ್ಸವಕ್ಕೆ ಆಸಿಯಾನ್‌ ಒಕ್ಕೂಟದ ನಾಯಕರನ್ನು ಗಣ್ಯ ಅತಿಥಿಗಳನ್ನಾಗಿ ಪ್ರಧಾನಿ ಮೋದಿ ಆಹ್ವಾನಿಸಿದ್ದರು. ಭಾರತದ Act East ನೀತಿಗೆ ಮತ್ತಷ್ಟು ಬಲ ಸೇರಿಸುವ ನಿಟ್ಟಿನಲ್ಲಿ ಪ್ರಧಾನಿಯ ಈ ಪ್ರವಾಸ ಮಹತ್ವ ಪಡೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com