ಸರ್ಕಾರದಿಂದಲೇ 7 ವಾರದ ಹೆರಿಗೆ ರಜೆ ಸಂಬಳ; 'ಪ್ರಸೂತಿ ರಜೆ' ಬಗ್ಗೆ ಕೇಂದ್ರದ ಮಹತ್ವದ ಪ್ರಸ್ತಾವನೆ

ಗರ್ಭಿಣಿ ಉದ್ಯೋಗಸ್ಥ ಮಹಿಳೆಯರ ಹೆರಿಗೆ ರಜೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ್ದು, ಇನ್ನು ಮುಂದೆ ಗರ್ಭಿಣಿ ಮಹಿಳಾ ಉದ್ಯೋಗಸ್ಥರ ವಾರಗಳ ಪ್ರಸೂತಿ ರಜೆ ವೇತನವನ್ನು ಕೇಂದ್ರ ಸರ್ಕಾರವೇ ಭರಿಸಲಿದೆಯಂತೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಗರ್ಭಿಣಿ ಉದ್ಯೋಗಸ್ಥ ಮಹಿಳೆಯರ ಹೆರಿಗೆ ರಜೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ್ದು, ಇನ್ನು ಮುಂದೆ ಗರ್ಭಿಣಿ ಮಹಿಳಾ ಉದ್ಯೋಗಸ್ಥರ  ವಾರಗಳ ಪ್ರಸೂತಿ ರಜೆ ವೇತನವನ್ನು ಕೇಂದ್ರ ಸರ್ಕಾರವೇ ಭರಿಸಲಿದೆಯಂತೆ.
ಹೌದು.. ಇನ್ನು ಮುಂದೆ ಮಹಿಳೆಯರಿಗೆ ನೀಡಲಾಗುವ ಇಪ್ಪತ್ತಾರು ವಾರಗಳ ಹೆರಿಗೆ ರಜೆ ಪೈಕಿ 7 ವಾರಗಳ ರಜೆಯ ವೇತನದ ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲದೆ, ಖಾಸಗಿ ಸಂಸ್ಥೆ ಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಉದ್ಯೋಗದಾತರಿಗೆ ಕೇಂದ್ರ ಸರ್ಕಾರವು 7 ವಾರಗಳ ವೇತನದ ಮೊತ್ತವನ್ನು ಪಾವತಿಸಲಿದೆ ಎಂದು  ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯ ಗುರುವಾರ ಘೋಷಣೆ ಮಾಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಾರ್ಯದರ್ಶಿ ರಾಕೇಶ್‌ ಶ್ರೀವಾಸ್ತವ ಅವರು, ಈ ನಿಯಮ ಮಾಸಿಕ 15 ಸಾವಿರ ರೂ.ಗಳಿಗಿಂತ ಹೆಚ್ಚಿನ ವೇತನ ಪಡೆಯುತ್ತಿರುವಂಥ ಮಹಿಳೆಯರ ಹೆರಿಗೆ ರಜೆಗೆ ಮಾತ್ರ ಅನ್ವಯಿಸುತ್ತದೆ. 12 ರಿಂದ 26 ವಾರಗಳ ಕಾಲ ಹೆರಿಗೆ ರಜೆ ವಿಸ್ತರಿಸಿದ ಬಳಿಕ ಮಹಿಳೆಯರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳದೇ ಇರುವ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಜ್ಯ ಸರ್ಕಾರಗಳ ಬಳಿ ಲೇಬರ್‌ ಸೆಸ್‌ ಎಂದು ಸಂಗ್ರಹಿಸಲಾಗುವ ಮೊತ್ತ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತಿಲ್ಲ ಎಂದು ಅವರು ಹೇಳಿದರು. 
ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಅನ್ವಯ
ಅಂತೆಯೇ ಕೆಲ ಖಾಸಗಿ ಕಂಪನಿಗಳು ಗರ್ಭಿಣಿ ಮಹಿಳೆಯರನ್ನು ಉದ್ಯೋಗದಿಂದ ತೆಗೆದಿರುವ ಬಗ್ಗೆಯೂ ದೂರುಗಳು ದಾಖಲಾಗಿದ್ದು, ಸರ್ಕಾರ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರೆಲ್ಲರಿಗೂ ಸರ್ಕಾರದಿಂದ ಈ ನೆರವು ನೀಡುವುದಾಗಿ ರಾಕೇಶ್ ಶ್ರೀವಾಸ್ತವ್ ಅವರು ಘೋಷಣೆ ಮಾಡಿದರು.  ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಪ್ರತಿ ತಿಂಗಳು 15 ಸಾವಿರ ರೂ.ಗಿಂತ ಹೆಚ್ಚಿನ ಸಂಬಳ ಪಡೆಯುತ್ತಿರುವ ಮಹಿಳೆಯರ 26 ವಾರಗಳ ಹೆರಿಗೆ ರಜೆ ಪೈಕಿ 7 ವಾರಗಳ ವೇತನವನ್ನು ಭರಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು. 2017ರ ಮಾರ್ಚ್ ವರೆಗೆ ಈ ನಿಧಿಯಲ್ಲಿ 32,632 ಕೋಟಿ ರೂ.ಗಳಿದ್ದವು. ಈ ಪೈಕಿ 7,500 ಕೋಟಿ ರೂ. ಮೊತ್ತವನ್ನು ಮಾತ್ರ ಬಳಕೆ ಮಾಡಲಾಗಿದ್ದು, ಕಾರ್ಮಿಕ ಕಲ್ಯಾಣ ಸೆಸ್ಗೆ ಹಣವನ್ನು ಮಾಲೀಕರಿಗೆ ಕೊಡುವಂತೆ ನಿರ್ಧರಿಸಲಾಗುವುದು ಎಂದು ರಾಕೇಶ್ ಶ್ರೀವಾಸ್ತವ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com