ಭಯದ ವಾತವಾರಣ ಸೃಷ್ಟಿಸಲು ನರೇಂದ್ರ ದಾಬೋಲ್ಕರ್ ಹತ್ಯೆ - ನ್ಯಾಯಾಲಯಕ್ಕೆ ಸಿಬಿಐ ಹೇಳಿಕೆ

ಸಮಾಜ ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ ಭಯದ ವಾತವಾರಣ ಸೃಷ್ಟಿಸಲು ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಮಾಡಲಾಗಿದೆ ಎಂದು ಸಿಬಿಐ ಇಂದು ನ್ಯಾಯಾಲಯಕ್ಕೆ ತಿಳಿಸಿದೆ.
ವಿಚಾರವಾದಿ ನರೇಂದ್ರ ದಾಬೋಲ್ಕರ್
ವಿಚಾರವಾದಿ ನರೇಂದ್ರ ದಾಬೋಲ್ಕರ್

ಪುಣೆ: ಸಮಾಜ ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ  ಭಯದ ವಾತವಾರಣ ಸೃಷ್ಟಿಸಲು  ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಮಾಡಲಾಗಿದೆ ಎಂದು ಸಿಬಿಐ ಇಂದು ನ್ಯಾಯಾಲಯಕ್ಕೆ ತಿಳಿಸಿದೆ.

ದಾಬೋಲ್ಕರ್ ಹತ್ಯೆ ಪ್ರಕರಣದ ಆರೋಪಿಗಳಾದ ಸಚಿನ್ ಅಂದೂರೆ ಮತ್ತು ಶರದ್ ಕಾಲಸ್ಕರ್  ವಿರುದ್ಧ  ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಸೆಕ್ಷನ್  15 ( ಉಗ್ರ ಚಟುವಟಿಕೆ ) ಮತ್ತು ಸೆಕ್ಷನ್ 16ರಡಿಯಲ್ಲಿ  ( ಉಗ್ರ ಚಟುವಟಿಕೆಗೆ ಶಿಕ್ಷೆ )   ಚಾರ್ಚ್ ಶೀಟ್ ದಾಖಲಿಸಲು 90 ದಿನಗಳ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಸಿಬಿಐ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದೆ.

ಈ ಪ್ರಕರಣದಲ್ಲಿ  ಅಂದೂರೆ ಮತ್ತು ಕಾಲಸ್ಕರ್  ಸೇರಿದಂತೆ ಬಂಧಿಸಲಾಗಿರುವ ಆರು ಆರೋಪಿಗಳ ಪೈಕಿ ಐವರ ವಿರುದ್ಧ ಪೂರಕ ಜಾರ್ಜ್ ಶೀಟ್ ದಾಖಲಿಸಲು  ಸಿಬಿಐ ನವೆಂಬರ್ 18ರಿಂದ   90 ದಿನ ತೆಗೆದುಕೊಂಡಿದೆ.
ಆರು ಮಂದಿ ಆರೋಪಿಗಳ ವಿರುದ್ಧವೂ ಸಿಬಿಐ 2016ರಲ್ಲಿ ಜಾರ್ಜ್ ಶೀಟ್ ದಾಖಲಿಸಿತ್ತು.

 2013, ಆಗಸ್ಟ್ 20 ರಂದು ಅಂದೂರೆ ಹಾಗೂ ಕಾಲಸ್ಕರ್ ಪುಣೆಯಲ್ಲಿ  ವಿಚಾರವಾದಿ ನರೇಂದ್ರ ದಾಬೊಲ್ಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ನರೇಂದ್ರ ದಾಬೋಲ್ಕರ್ ಅವರನ್ನು ವ್ಯವಸ್ಥಿತ ಸಂಚು ರೂಪಿಸಿ ಹತ್ಯೆ ಮಾಡಲಾಗಿದೆ ಎಂದು  ಪ್ರಥಮ ದರ್ಜೆ ಜೂಡಿಷಿಯಲ್ ಮ್ಯಾಜಿಸ್ಟ್ರೇಟ್  ಬಳಿ ಸಿಬಿಐ  ಹೇಳಿಕೆ ನೀಡಿದೆ.

ಜನರ ಮನಸ್ಸು ಹಾಗೂ ಸಮಾಜದಲ್ಲಿ ಭಯದ ವಾತಾವಾರಣ ಸೃಷ್ಟಿಸಲು ನರೇಂದ್ರ ದಾಬೋಲ್ಕರ್  ಹತ್ಯೆ ಮಾಡುವ ಮೂಲಕ ಸನಾತನ ಸಂಸ್ಥೆಯಲ್ಲಿ ನಂಬಿಕೆ ಇರದ ಜನರಿಗೆ ಉದ್ದೇಶಪೂರ್ವಕವಾಗಿ ಸಂದೇಶ ಕಳುಹಿಸಲಾಗಿದೆ ಎಂದು ಸಿಬಿಐ ತಿಳಿಸಿದೆ

ನರೇಂದ್ರ ದಾಬೋಲ್ಕರ್ ಹತ್ಯೆ  ಆರೋಪಿಗಳು ವಿಚಾರವಾದಿ ಗೋವಿಂದ ಪನ್ಸಾರೆ, ಕನ್ನಡದ ಹೆಸರಾಂತ ಸಂಶೋಧಕ ಎಂ. ಎಂ. ಕಲಬುರಗಿ ಮತ್ತು  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲೂ  ತೊಡಗಿಸಿಕೊಂಡಿದ್ದಾರೆ ಎಂದು  ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.
ಆದರೆ, ಸಿಬಿಐ ಈ ಹೇಳಿಕೆಯನ್ನು  ಅಂದೂರೆ ಪರ ವಕೀಲರು ತಿರಸ್ಕರಿಸಿದ್ದಾರೆ. ಆದಾಗ್ಯೂ, ಇತರ ಎರಡು ಪ್ರಕರಣಗಳಲ್ಲಿ ಸಿಬಿಐ ಈವರೆಗೂ ಚಾರ್ಚ್ ಶೀಟ್ ದಾಖಲಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com