ಗಜ ಚಂಡಮಾರುತ: ಬಲಿಯಾದವರ ಸಂಖ್ಯೆ 35ಕ್ಕೆ ಏರಿಕೆ

ಗಜ ಚಂಡಮಾರುತದಿಂದ ತಮಿಳುನಾಡಿನಾದ್ಯಂತ ಇದುವರೆಗೆ ಮೃತಪಟ್ಟವರ ಸಂಖ್ಯೆ 35ಕ್ಕೇರಿದೆ ಎಂದು ...
ಗಜ ಚಂಡಮಾರುತಕ್ಕೆ ಸಿಲುಕಿದ ಪುದುಕೊಟ್ಟೈಯ ಕೊಲ್ಲುಕಾಡು ಗ್ರಾಮ
ಗಜ ಚಂಡಮಾರುತಕ್ಕೆ ಸಿಲುಕಿದ ಪುದುಕೊಟ್ಟೈಯ ಕೊಲ್ಲುಕಾಡು ಗ್ರಾಮ
Updated on

ಚೆನ್ನೈ; ಗಜ ಚಂಡಮಾರುತದಿಂದ ತಮಿಳುನಾಡಿನಾದ್ಯಂತ ಇದುವರೆಗೆ ಮೃತಪಟ್ಟವರ ಸಂಖ್ಯೆ 35ಕ್ಕೇರಿದೆ ಎಂದು ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇದುವರೆಗೆ 1,27, 448 ಮರಗಳು ಧರೆಗುರುಳಿವೆ ಎಂದಿದ್ದಾರೆ.

ನಾಗಪಟ್ಟಿಣಂ ಮತ್ತು ವೇದರಣ್ಯಂ ನಡುವೆ ತಮಿಳುನಾಡು ತೀರದ ಮೂಲಕ ದಾಟಿ ಹೋದ ಗಜ ಚಂಡಮಾರುತ 5-6 ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಮತ್ತು ಸಾವು ನೋವನ್ನು ಉಂಟುಮಾಡಿದೆ. ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಬೀಸಿದ ಚಂಡಮಾರುತದಿಂದ ಹಲವು ಮನೆಗಳು, ಮರಗಿಡಗಳು ಧರೆಗುರುಳಿವೆ. ಎಲೆಕ್ಟ್ರಿಕ್ ಕೇಬಲ್ ಗಳು ಮುರಿದಿವೆ,

ನಿನ್ನೆ ಒಂದೇ ದಿನ 13 ಮಂದಿ ಮೃತಪಟ್ಟಿದ್ದು 28 ಜಾನುವಾರುಗಳು ಅಸುನೀಗಿವೆ. ಕದ್ದಲೂರು, ನಾಗಪಟ್ಟಿಂ, ರಾಮನಾಥಪುರಂ, ತಂಜಾವೂರು, ಪುದುಕೊಟ್ಟೈ ಮತ್ತು ತಿರುವಾರೂರು ಜಿಲ್ಲೆಗಳಲ್ಲಿ 81,949 ಜನರನ್ನು 471 ಆಶ್ರಯ ತಾಣಗಳಿಗೆ ವರ್ಗಾಯಿಸಲಾಗಿತ್ತು.

ನಾಗಪಟ್ಟಿಂ ಜಿಲ್ಲೆಯ ವೇಲಂಕಣ್ಣಿಯಲ್ಲಿ  16ನೇ ಶತಮಾನದ ಚರ್ಚ್ ಹಾನಿಗೀಡಾಗಿದೆ. ಚಂಡಮಾರುತದ ಆರ್ಭಟಕ್ಕೆ ಸಿಲುಕಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಮತ್ತು ಗಾ ಯಗೊಂಡವರಿಗೆ 25 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೆ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಪರಿಹಾರ ಘೋಷಿಸಿದ್ದಾರೆ.

ಬೆಳೆ ಹಾನಿ, ಮೀನುಗಾರಿಕೆ ದೋಣಿಗಳು, ಮನೆಗಳು, ಜಾನುವಾರುಗಳುಗಳು ಮೃತಪಟ್ಟ ಬಗ್ಗೆ ಮೌಲ್ಯಮಾಪನ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಸಾವು ನೋವು ಮಾತ್ರವಲ್ಲದೆ 1,471 ಗುಡಿಸಲುಗಳು ಭಾಗಶಃ ಮತ್ತು 216 ಮನೆಗಳು ಸಂಪೂರ್ಣ ನಾಶಗೀಡಾಗಿವೆ.ಒಟ್ಟು 4,987 ಮರಗಳು ನೆಲಸಮವಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com