ಶಬರಿಮಲೆಗೆ ಮಹಿಳೆಯ ಪ್ರವೇಶ ಸಂಬಂಧ ನಡೆಯುತ್ತಿರುವ ಪ್ರತಿಭಟನೆ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಸ್ಲೀಮಾ, ಮಹಿಳಾ ಕಾರ್ಯಕರ್ತೆಯರು ಶಬರಿಮಲೆಗೆ ತೆರಳಲು ಯಾಕಿಷ್ಟು ಉತ್ಸುಕತೆ ತೋರುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಶಬರಿಮಲೆಗಿಂತ ಮಿಗಿಲಾಗಿ ಮಹಿಳೆಯರು ತೀರಾ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗೃಹ ಹಿಂಸೆ, ಲೈಂಗಿಕ ದೌರ್ಜನ್ಯ, ಧ್ವೇಷದಂತಹ ಸಮಸ್ಯೆಗಳಲ್ಲಿ ಬೇಯುತ್ತಿದ್ದಾರೆ. ಶಿಕ್ಷಣ, ಆರೋಗ್ಯದಿಂದ ವಂಚಿತರಾಗುತ್ತಿದ್ದು, ಸ್ವತಂತ್ರವಾಗಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಪುರುಷರಿಗೆ ಸರಿಸಮಾನ ವೇತನ ಸಿಗುತ್ತಿಲ್ಲ. ಇಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರ ಪರ ಹೋರಾಟಗಾರ್ತಿಯರು ತಮ್ಮ ಹೋರಾಟ ಮಾಡಲಿ, ಸಾಧ್ಯವಾದರೆ ಹಳ್ಳಿಗಳಿಗೆ ತೆರಳಿ ಅಲ್ಲಿನ ಮಹಿಳೆಯ ಸಮಸ್ಯೆ ಆಲಿಸಲಿ ಎಂದು ಅವರು ಹೇಳಿದರು.