ಈಗಿನ ಕಾಲಘಟ್ಟದಲ್ಲಿ ಮಾಧ್ಯಮಗಳ ಮೇಲೆ ಸೆನ್ಸಾರ್ ಶಿಪ್ ಅಸಾಧ್ಯ: ಅರುಣ್ ಜೇಟ್ಲಿ

ಈಗಿನ ಕಾಲಘಟ್ಟದಲ್ಲಿ ಯಾವುದೇ ರೀತಿಯ ಮಾಧ್ಯಮಗಳ ಮೇಲೆ ಸೆನ್ಸಾರ್ ಶಿಪ್ ಅಳವಡಿಕೆ ಅಸಾಧ್ಯ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಈಗಿನ ಕಾಲಘಟ್ಟದಲ್ಲಿ ಯಾವುದೇ ರೀತಿಯ ಮಾಧ್ಯಮಗಳ ಮೇಲೆ ಸೆನ್ಸಾರ್ ಶಿಪ್ ಅಳವಡಿಕೆ ಅಸಾಧ್ಯ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ದೆಹಲಿಯಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅರುಣ್ ಜೇಟ್ಲಿ, ಇಂದು ಮುದ್ರಣ, ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ಸ್ ಮಾಧ್ಯಮಗಳು ತುಂಬಾ ಪೈಪೋಟಿ ಎದುರಿಸುತ್ತಿವೆ. ಮಾಧ್ಯಮಗಳ ಮೇಲೆ ಯಾವುದೇ ರೀತಿಯ ಒತ್ತಡ ಹೇರುವಿಕೆ ಅಸಾಧ್ಯವಾದದ್ದಾಗಿದ್ದು, ದೇಶದಲ್ಲಿ ತಂತ್ರಜ್ಞಾನದ ಅಸಾಧಾರಣ ಪ್ರಗತಿಯಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಇಂದು ನೀವು ಕುಳಿತ ಜಾಗದಿಂದಲೇ ಬೆರಳ ತುದಿಯಲ್ಲೇ ಇಡೀ ವಿಶ್ವಕ್ಕೆ ಸಂದೇಶ ರವಾನಿಸಬಹುದು. ಇದಕ್ಕೆ ತಂತ್ರಜ್ಞಾನದ ಪ್ರಗತಿ ಕಾರಣವಾಗಿದ್ದು, ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳು ಮಾಧ್ಯಮಗಳಿಗಿಂತಲೂ ಹೆಚ್ಚುವಾಗವಾಗಿ ಜನರನ್ನು ತಲುಪುತ್ತಿವೆ. ಇಂದು ಮಾಧ್ಯಮಗಳು ಸಾಕಷ್ಟು ಪೈಪೋಟಿ ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ನಡುವೆಯೇ ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕಿದೆ. ವೀಕ್ಷಕರಿಗೆ ಅಥವಾ ಓದುಗರಿಗೆ ಮಾಧ್ಯಮಗಳು ತಮ್ಮ ಅಭಿಪ್ರಾಯ ತಿಳಿಸಲು ಮುಕ್ತವಾಗಿದ್ದು, ಮಾಧ್ಯಮ ಸ್ವಾತಂತ್ರ್ಯ ಭಾರತೀಯ ಜೀವನ ಅವಿಭಾಜ್ಯ ಅಂಗವಾಗಿದೆ ಎಂದು ಜೇಟ್ಲಿ ಹೇಳಿದರು.ವಿಶ್ವಾಸಾರ್ಹತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com